Home › ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯ ಅರಣ್ಯ ವೀಕ್ಷಕ, ಬಾಲಕೃಷ್ಣ ಗೌಡ ನೇಣುಬಿಗಿದು ಆತ್ಮಹತ್ಯೆ: ಕಳಿಯ ಗ್ರಾಮದ ಗೇರುಕಟ್ಟೆ, ಪಲ್ಲಿದಲ್ಕೆ ನಿವಾಸಿ
ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯ ಅರಣ್ಯ ವೀಕ್ಷಕ, ಬಾಲಕೃಷ್ಣ ಗೌಡ ನೇಣುಬಿಗಿದು ಆತ್ಮಹತ್ಯೆ: ಕಳಿಯ ಗ್ರಾಮದ ಗೇರುಕಟ್ಟೆ, ಪಲ್ಲಿದಲ್ಕೆ ನಿವಾಸಿ
ONLINE PUDU / Thursday, June 03, 2021
ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಪಲ್ಲಿದಲ್ಕೆ ನಿವಾಸಿ, ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದ ಅರಣ್ಯ ವೀಕ್ಷಕ ಬಾಲಕೃಷ್ಣ ಗೌಡ (40.ವ) ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಬಾಲಕೃಷ್ಣ ಗೌಡ ಅವರು ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಜೂ.3ರಂದು ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮನೆಯ ಪಕ್ಕದ ತೋಟದಲ್ಲಿ ದೇಹ ಪತ್ತೆಯಾಗಿದೆ. ಇತ್ತೀಚೆಗಷ್ಟೇ ವಿವಾಹವಾಗಿದ್ದ ಅವರು ಯಾವ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾರೆ ಎಂಬುವುದು ಇನ್ನಷ್ಟೇ ತಿಳಿದುಬರಬೇಕಿದೆ.