Home › ತುಳು ಅಸ್ಮಿತೆಯ ಅವಮಾನ ಖಂಡನೀಯ: ತುಳುವೆರೆ ಪಕ್ಷ: ಸಂಸದೆ ಶೋಭಾ ಕರಂದ್ಲಾಜೆ ದ್ವಿಮುಖ ನೀತಿ ಹೇಳಿಕೆಗೆ ವಿರೋಧ
ತುಳು ಅಸ್ಮಿತೆಯ ಅವಮಾನ ಖಂಡನೀಯ: ತುಳುವೆರೆ ಪಕ್ಷ: ಸಂಸದೆ ಶೋಭಾ ಕರಂದ್ಲಾಜೆ ದ್ವಿಮುಖ ನೀತಿ ಹೇಳಿಕೆಗೆ ವಿರೋಧ
ONLINE PUDU / Tuesday, June 22, 2021
ಬೆಳ್ತಂಗಡಿ: ಸಂಸದೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ತುಳು ರಾಜ್ಯದ ಬೇಡಿಕೆಯು ಕುಚೋದ್ಯದ ಬೇಡಿಕೆ ಎಂದಿದ್ದು ಖಂಡನೀಯ. ಕನ್ನಡ ಏಕೀಕರಣ ಚಳವಳಿಯನ್ನು ಸಮರ್ಥಿಸಿರುವ ಇವರು ಅದೇ ತುಳು ಏಕೀಕರಣ ಚಳವಳಿಯನ್ನು ಕುಚೋದ್ಯದ ಬೇಡಿಕೆ ಎಂದಿದ್ದು ಇವರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ತುಳುವರ ನಾಡು ನುಡಿಯ ಹೋರಾಟವನ್ನು ಅವಮಾನಿಸುವ ಮೂಲಕ ಸಮಸ್ತ ತುಳುವರ ಭಾವನೆಗಳಿಗೆ ನೋವು ತಂದಿದ್ದಾರೆ.
ತುಳು ಅಸ್ಮಿತೆಯ ವಿಚಾರಗಳನ್ನು ಯಾರೇ ಕುಚೋದ್ಯ ಮಾಡಿದರೂ ಅದನ್ನು ತುಳುವೆರೆ ಪಕ್ಷ ಖಂಡಿಸುತ್ತದೆ ಎಂದು ಪಕ್ಷದ ಅದ್ಯಕ್ಷರಾದ ಶೈಲೇಶ್ ಆರ್.ಜೆ. ಮತ್ತು ಬೆಳ್ತಂಗಡಿ ತಾಲೂಕು ಘಟಕದ ಅದ್ಯಕ್ಷರಾದ ಪ್ರಶಾಂತ್ ಎಮ್. ಇವರು ತಿಳಿಸಿದ್ದಾರೆ.