ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿಯಲ್ಲಿ ಕಳ್ಳತನ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು: ಮಂಗಳವಾರ ಲಿಂಬೆ ಮಾರಾಟ ಮಾಡುತ್ತಿದ್ದಾತನ ಹಣ ಕದ್ದು ಪರಾರಿಯಾಗಿದ್ದ

ಬೆಳ್ತಂಗಡಿಯಲ್ಲಿ ಕಳ್ಳತನ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು: ಮಂಗಳವಾರ ಲಿಂಬೆ ಮಾರಾಟ ಮಾಡುತ್ತಿದ್ದಾತನ ಹಣ ಕದ್ದು ಪರಾರಿಯಾಗಿದ್ದ

ಬೆಳ್ತಂಗಡಿ: ಲಿಂಬೆ ಹಣ್ಣು ಮಾರುವವರ ಹಣವನ್ನು ಕದ್ದು ಓಡಿ ತಪ್ಪಿಸಿಕೊಂಡಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ನಡೆದಿದೆ.

ಜೂ. 15 ಮಂಗಳವಾರ ಬೆಳಗ್ಗೆ ಬಸ್ಸ್ ನಿಲ್ದಾಣದ ಸಮೀಪ ಲಿಂಬೆ ಹಣ್ಣು ಮಾರಾಟ ಮಾಡುವವರ ಬಳಿಯಿಂದ ಹಣವನ್ನು ಕಳ್ಳನೊಬ್ಬ ಕದ್ದು ಓಡಿದಾಗ, ಅವನನ್ನು ಬೆನ್ನಟ್ಟಿ ಹಿಡಿಯಲು ಯತ್ನಿಸಿದಾಗ ಹಣವನ್ನು ಬಿಸಾಡಿ ತಪ್ಪಿಸಿಕೊಂಡಿದ್ದ. ಅದರೆ ಜೂ. 16ರಂದು ಬುಧವಾರ ಬೆಳಗ್ಗೆ ಪುನಃ ಅದೇ ಜಾಗಕ್ಕೆ ಬಂದಿದ್ದು ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಆತನ ಜೊತೆಗೆ ಕೆಲಸ ಮಾಡುವವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈತ ಗದಗ ಮೂಲದವನು ಎಂದು ತಿಳಿದು ಬಂದಿದ್ದು, ತೋಟದ ಕೆಲಸಕ್ಕಾಗಿ ತನ್ನ ಊರವರು, ಸ್ನೇಹಿತರೊಂದಿಗೆ ಬೆಳ್ತಂಗಡಿಗೆ ಬಂದಿದ್ದ ಎನ್ನಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!