ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅತ್ಯಾಚಾರ ಆರೋಪಿ ಬಂಧನ: ಮದುವೆಯಾಗುವುದಾಗಿ‌ ನಂಬಿಸಿ, ಅತ್ಯಾಚಾರವೆಸಗಿದ ಆರೋಪ: ಯುವತಿ ಮನೆಯಲ್ಲೇ ದೌರ್ಜನ್ಯ

ಅತ್ಯಾಚಾರ ಆರೋಪಿ ಬಂಧನ: ಮದುವೆಯಾಗುವುದಾಗಿ‌ ನಂಬಿಸಿ, ಅತ್ಯಾಚಾರವೆಸಗಿದ ಆರೋಪ: ಯುವತಿ ಮನೆಯಲ್ಲೇ ದೌರ್ಜನ್ಯ

ಬೆಳ್ತಂಗಡಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯಾದ ಬಳಿಕ ಮೋಸ ಮಾಡಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಿರುದ್ಯಾವರ ಗ್ರಾಮದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಾಯಿಲ ಗ್ರಾಮದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಿರಣ್‌ ಎಂಬಾತ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡು, ಆತ್ಮೀಯತೆಯಿಂದ ಇದ್ದು, ಹುಡುಗಿಯ ಮನೆಗೆ ಹೋಗಿ ಬರುತ್ತಿದ್ದು ಮದುವೆಯಾಗುವುದಾಗಿ ಹುಡುಗಿಯನ್ನು ನಂಬಿಸಿದ್ದ. ಸಂತ್ರಸ್ತೆ ಆಕ್ಷೇಪಿಸಿದರೂ ಕೇಳದೇ ನಾನು ಮದುವೆಯಾಗುವ ಹುಡುಗ ಎಂದು ನಂಬಿಸಿ ಬಲತ್ಕಾರವಾಗಿ ಲೈಂಗಿಕವಾಗಿ ಬಳಸಿಕೊಂಡು, ಗರ್ಭವತಿಯಾಗಲು ಕಾರಣನಾಗಿದ್ದಾನೆ‌ ಹಾಗೂ ತಾನು ಏಳುವರೆ ತಿಂಗಳ ಗರ್ಭಿಣಿಯಾಗಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!