ಪೊಸರಡ್ಕ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ದೇರಾಜೆ ಗುಡ್ಡೆ ಕ್ಷೇತ್ರದಲ್ಲಿ ಗಣಹೋಮ ಸಹಿತ ವಿವಿಧ ಉಚ್ಚಾಟನಾ ಕಾರ್ಯಗಳು ನಡೆದಿವೆ. ಪ್ರಶ್ನೆ ಚಿಂತನೆಯ ಅನುಸಾರವಾಗಿ ದೇರಾಜೆ ಗುಡ್ಡೆಯಲ್ಲಿ ದೈವ ಹಾಗೂ ಕೊಡಮಣಿತ್ತಾಯ ಸಾನ್ನಿಧ್ಯವಿದ್ದು ಅದರ ಜೀರ್ಣೋದ್ಧಾರ ಕಾರ್ಯಕ್ರಮ ಪ್ರಥಮವಾಗಿ ನಡೆಯಬೇಕೆಂದು ತಿಳಿದು ಬಂದಿದೆ. ದೇರಾಜೆ ಕ್ಷೇತ್ರದಲ್ಲಿ ಪ್ರತೀ 5 ವರ್ಷಕೊಮ್ಮೆ ದೈವ ಕೊಡಮಣಿತ್ತಾಯ ನೇಮೋತ್ಸವ ನಡೆಸಲು ಈ ಸಂದರ್ಭ ತೀರ್ಮಾನಿಸಲಾಗಿದೆ. ಆ ಪ್ರಯುಕ್ತ ಪ್ರಥಮವಾಗಿ ದೇರಾಜೆ ಕ್ಷೇತ್ರದಲ್ಲಿ ಜೀರ್ಣೋದ್ಧಾರಾದಿ ಬ್ರಹ್ಮಕಲಶೋತ್ಸವದ ಕಾರ್ಯಗಳು ನಡೆಯಲಿವೆ. 2022 ಜನವರಿ ಒಳಗೆ ದೇರಾಜೆ ಕ್ಷೇತ್ರದ ಜೀರ್ಣೋದ್ಧಾರ ಸಂಪೂರ್ಣವಾದ ಬಳಿಕ ಪೊಸರಡ್ಕ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ರಮಗಳು ನಡೆಸುವುದಾಗಿ ನಿಶ್ಚಯಿಸಲಾಗಿದೆ ಎಂದು ತಿಳಿಸಲಾಗಿದೆ.
ದೇರಾಜೆ ಗುಡ್ಡೆಯಲ್ಲಿ ಈಚೆಗೆ ಸರ್ಪ ಸಂಸ್ಕಾರ, ಭೂ ವರಾಹ, ದರ್ಶನ ಹೋಮ ಈಚೆಗೆ ನಡೆದಿದ್ದು, ಗುರಿಕಾರರು, ಊರ ಹತ್ತು ಸಮಸ್ತರು ಭಾಗವಹಿಸಿದ್ದರು.