ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಡಂತ್ಯಾರು ಗ್ರಾಮ ಪಂಚಾಯಿತಿಯಿಂದ ಲಸಿಕಾ ಅಭಿಯಾನ: ಶಾಸಕ ಹರೀಶ್ ಪೂಂಜ ಚಾಲನೆ

ಮಡಂತ್ಯಾರು ಗ್ರಾಮ ಪಂಚಾಯಿತಿಯಿಂದ ಲಸಿಕಾ ಅಭಿಯಾನ: ಶಾಸಕ ಹರೀಶ್ ಪೂಂಜ ಚಾಲನೆ

 

ಮಡಂತ್ಯಾರು: ಮಡಂತ್ಯಾರು ಗ್ರಾಮ ಪಂಚಾಯಿತಿ ವತಿಯಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಡಂತ್ಯಾರು ವರ್ತಕರ ಸಂಘ ಮತ್ತು ಅಟೋ ರಿಕ್ಷಾ ಸಂಘದ ಸದಸ್ಯರಿಗೆ ಕೋವಿಡ್ 19 ಲಸಿಕಾ ಅಭಿಯಾನ ಜು.6ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನ ಸಭಾಭವನದಲ್ಲಿ ನಡೆಯಿತು.

 

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕೋವಿಡ್ 19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂ.ಫಾ. ಬೇಸಿಲ್ ವಾಸ್ ಶುಭ ಹಾರೈಸಿದರು. ಮಡಂತ್ಯಾರು ವರ್ತಕರ ಸಂಘ, ಜೆಸೀಐ, ರೋಟರಿ ಕ್ಲಬ್ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 500 ಡೋಸ್ ಲಸಿಕಾ ಅಭಿಯಾನ ನಡೆಯಿತು.

ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ, ಉಪಾಧ್ಯಕ್ಷೆ ಸಂಗೀತಾ ಶೆಟ್ಟಿ, ಮಾಲಾಡಿ ಗ್ರಾ.ಪಂ.‌ ಉಪಾಧ್ಯಕ್ಷ ದಿನೇಶ್ ಕರ್ಕೇರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಜೋಯೆಲ್ ಮೆಂಡೋನ್ಸಾ ಮತ್ತು ವಸಂತಿ ಲಕ್ಷ್ಮಣ, ತಾಲೂಕು ವೈದಾಧಿಕಾರಿ ಡಾ. ಕಲಾಮಧು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಗ್ರಾ.ಪಂ.‌ಪಿಡಿಒ ಪುರುಷೋತ್ತಮ ಜಿ.‌, ಲಸಿಕಾ ಅಭಿಯಾನ ಪ್ರಮುಖ್ ಉಮೇಶ್ ಕುಲಾಲ್ ದಲಾದವರು ಇದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!