ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಾದಿನಿ‌ ಜೊತೆ ಗಂಡ ಪರಾರಿ!: ಮನಸ್ತಾಪದಿಂದ ಮನೆಯಲ್ಲೇ ಉಳಿದ ಪತ್ನಿ: ಕಿರಿಯ ಪುತ್ರಿಯನ್ನು ಹುಡುಕಿ ಕೊಡುವಂತೆ ತಂದೆಯಿಂದ ದೂರು

ನಾದಿನಿ‌ ಜೊತೆ ಗಂಡ ಪರಾರಿ!: ಮನಸ್ತಾಪದಿಂದ ಮನೆಯಲ್ಲೇ ಉಳಿದ ಪತ್ನಿ: ಕಿರಿಯ ಪುತ್ರಿಯನ್ನು ಹುಡುಕಿ ಕೊಡುವಂತೆ ತಂದೆಯಿಂದ ದೂರು

ಬೆಳ್ತಂಗಡಿ: ಮದುವೆಯಾಗಿ 9 ತಿಂಗಳಲ್ಲೇ ಪತ್ನಿಯೊಂದಿಗೆ ಮನಸ್ತಾಪ ಬಂದು ಆಕೆಯನ್ನು ತವರು ಮನೆಯಲ್ಲಿ‌ ಬಿಟ್ಟ ಅಳಿಯ, ಇದೀಗ ಪತ್ನಿಯ ತಂಗಿಯನ್ನು‌ ಕರೆದುಕೊಂಡು ಹೋಗಿರುವ ಘಟನೆ ಜು.8ರಂದು ಗುರುವಾರ ಬೆಳಗ್ಗೆ ಕನ್ಯಾಡಿಯ ಕೈಕಂಬ ಬಳಿ‌ ನಡೆದಿದೆ.

ಬೆಳ್ತಂಗಡಿ ತಾಲೂಕು ಕನ್ಯಾಡಿ ಗ್ರಾಮದ ಕೈಕಂಬ ಬಳಿಯ ಮಹಮ್ಮದ್ ಎಂಬವರ ಪುತ್ರಿ ಸೌಧ ಎಂಬಾಕೆಯನ್ನು ಸುಮಾರು 9 ತಿಂಗಳ ಹಿಂದೆ ಮುಸ್ತಾಫ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಮಗಳು, ಅಳಿಯ ಮನೆಗೆ ಬಂದು ಹೋಗುತ್ತಿದ್ದ ಸಂದರ್ಭ ಮಹಮ್ಮದ್ ಅವರ ಕಿರಿಯ ಮಗಳು ರೈಹಾನ ಜೊತೆ ಮುಸ್ತಾಫ ಸಲುಗೆಯಿಂದ ಇದ್ದರು. ದೂರವಾಣಿ ಮೂಲಕವೂ ಮಾತನಾಡುತ್ತಿದ್ದರು. ಇತ್ತೀಚೆಗೆ ಸೌಧ ಹಾಗೂ ಮುಸ್ತಫಾ ‌ಅವರಿಗೆ ಮನಸ್ತಾಪ ಉಂಟಾಗಿ‌ ಸೌಧ ತಮ್ಮ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದರು. ಜು.8ರಂದು‌ ಬೆಳಗ್ಗೆ 6-45 ಗಂಟೆ ಸುಮಾರಿಗೆ ಮುಸ್ತಫಾ ತನ್ನ ತಾಯಿ ಜೊತೆ ಮಹಮ್ಮದ್ ಅವರ ಮನೆ ಬಳಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಮಹಮ್ಮದ್ ಅವರ ಕಿರಿಯ ಪುತ್ರಿ ರೈಹಾನ ತನ್ನ ಮನೆಯಲ್ಲಿ ಯಾರಿಗೂ ತಿಳಿಸದೆ ಬ್ಯಾಗ್ ಜೊತೆ ಮುಸ್ತಫಾ ಜೊತೆ ಕಾರಿನಲ್ಲಿ ತೆರಳಿದ್ದಾರೆ. ಬಳಿಕ ರೈಹಾನಾ‌ ಮನೆಗೂ ಬಂದಿಲ್ಲ, ಮುಸ್ತಫಾ ಮನೆಗೂ ತೆರಳಿಲ್ಲ, ಆಕೆಯನ್ನು ಹುಡುಕಿ ಕೊಡಿ ಎಂದು ಆಕೆಯ ತಂದೆ ಮಹಮ್ಮದ್ ದೂರಿನಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!