https://twitter.com/AirbusHeli/status/1420685734118367232?s=20
ಕಂಪನಿಯ ಪ್ರಕಾರ, ಚಾಪರ್ ರಿಮೋಟ್ ಪೈಲಟ್ ಮಾಡಲಾದ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (ಇವಿಟಿಒಎಲ್) ಹಾರಾಟವನ್ನು ನಡೆಸುವಲ್ಲಿ ಯಶಸ್ವಿಯಾಗಿದೆ. ಇದು ಮಲ್ಟಿಕಾಪ್ಟರ್ ಕಾನ್ಫಿಗರೇಶನ್ ಅನ್ನು ಹೊಂದಿದ್ದು, ನಾಲ್ಕು ಹೈ-ಲಿಫ್ಟ್ ಪ್ರೊಪಲ್ಷನ್ ಘಟಕಗಳನ್ನು ಹೊಂದಿದೆ. ಗಂಟೆಗೆ ಸುಮಾರು 120 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ನಾಲ್ವರು ಪ್ರಯಾಣಿಕರನ್ನು ತೆಗೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯ ವೆಬ್‌ಸೈಟ್ ಹೇಳಿದೆ.
ಕಂಪನಿಯು ಮೇ 2019 ರಲ್ಲಿ ತನ್ನ ಮೊದಲ ಟೇಕ್-ಆಫ್ ನಡೆಸಿದರೂ, ಇತ್ತೀಚಿನ ಪರೀಕ್ಷಾ ಹಾರಾಟ ಬಹಳ ಮುಖ್ಯವಾಗಿದೆ. ಏರ್‌ಬಸ್ 2,130 ಕೆಜಿ ತೂಕದೊಂದಿಗೆ ಟೇಕಾಫ್ ಆಗಿದೆ. ಈ ಬಸ್ ಸುಮಾರು 100 ಕ್ಕೂ ಹೆಚ್ಚು ಪರೀಕ್ಷಾ ಹಾರಾಟಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.