ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಬೆಳ್ಳಿಯಿಂದ ಭಾರತದ ಪದಕ ಬೇಟೆ‌ ಆರಂಭ: 'ಮೀರಾ ಭಾಯಿ ಚಾನು' ಸಾಧನೆಗೆ ರಾಷ್ಟ್ರದಲ್ಲಿ ಹರ್ಷ

ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಬೆಳ್ಳಿಯಿಂದ ಭಾರತದ ಪದಕ ಬೇಟೆ‌ ಆರಂಭ: 'ಮೀರಾ ಭಾಯಿ ಚಾನು' ಸಾಧನೆಗೆ ರಾಷ್ಟ್ರದಲ್ಲಿ ಹರ್ಷ

ಟೋಕಿಯೋ: ಟೋಕಿಯೋದಲ್ಲಿ ನಡೆಯುತ್ತಿರುವ ‌ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಬೆಳ್ಳಿಯೊಂದಿಗೆ ಪದಕ ಬೇಟೆ ಆರಂಭಿಸಿದ್ದು, ದೇಶದಲ್ಲಿ ಹರ್ಷಮಯ ವಾತಾವರಣ ಮೂಡಿದೆ. 49 ಕೆ ಜಿ. ವಿಭಾಗದಲ್ಲಿ ವೈಟ್ ಲಿಫ್ಟರ್ ಮೀರಾ ಭಾಯಿ ಚಾನು ಅವರು ಬೆಳ್ಳಿ ಪದಕ ಪಡೆದಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಗಳಿಸಿದ ಮೊದಲ ಪದಕ ಎಂಬುದು ಹೆಮ್ಮೆಯ ವಿಚಾರವಾಗಿದೆ. ವೈಟ್ ಲಿಫ್ಟಿಂಗ್ ನಲ್ಲಿ ಭಾರತ ಪ್ರಥಮ ಬಾರಿಗೆ ಬೆಳ್ಳಿ ಪದಕ ‌ಪಡೆದ ಸಾಧನೆಯೂ ಚಾನು ಅವರದ್ದಾಗಿದೆ. ಈ ಹಿಂದೆ ಕರ್ಣಂ ಮಲ್ಲೇಶ್ವರಿ ಕಂಚಿನ‌ ಪದಕ‌ ಪಡೆದಿದ್ದರು. ವಿಶೇಷವೆಂದರೆ ಮೀರಾ ಅವರು ಈ ಬಾರಿ ದೇಶದಿಂದ ಆಯ್ಕೆಯಾದ ಏಕೈಕ ಮಹಿಳಾ ವೈಟ್ ಲಿಫ್ಟರ್ ಆಗಿ ಟೋಕಿಯೋಗೆ ತೆರಳಿದ್ದರು. ಮೀರಾ ಅವರ ಸಾಧನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.‌

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!