ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಿಯುಸಿಯಲ್ಲಿ ಶೇ. 100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ವತಿಯಿಂದ ಗೌರವಾರ್ಪಣೆ

ಪಿಯುಸಿಯಲ್ಲಿ ಶೇ. 100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ವತಿಯಿಂದ ಗೌರವಾರ್ಪಣೆ

 

 

 

 

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ತಾಲೂಕಿನಲ್ಲಿ ಪಿಯುಸಿಯಲ್ಲಿ ಶೇ. 100 ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನ ಸಿಂಚನ, ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ಜ್ಯೋತಿಕಾ, ಉಜಿರೆ ಎಸ್.ಡಿ.ಎಂ. ರೆಸಿಡೆನ್ಸಿಯಲ್ ಪಿಯು ಕಾಲೇಜಿನ ದೀಪಕ್ ಹೆಬ್ಬಾರ್ ಮತ್ತು ಉಜಿರೆ ಎಸ್.ಡಿ.ಎಂ. ಪಿಯು ಕಾಲೇಜಿನ ಸಮೀಕ್ಷಾ ಅವರು ಶೇ.100 ಅಂಕ ಗಳಿಸಿದ ಸಾಧನೆ ಮಾಡಿದ್ದರು. ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮೋಹನ್ ನಾರಾಯಣ್ ಅವರು ವಿದ್ಯಾರ್ಥಿಗಳನ್ನು ಗೌರವಿಸಿದರು. ಮೋಹನ್ ನಾರಾಯಣ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ಮತ್ತು ಛಲವನ್ನು ಪಟ್ಟು ಹಿಡಿಯಬೇಕು ಮತ್ತು ಆದರ್ಶ ವ್ಯಕ್ತಿಗಳನ್ನು ಆದರ್ಶವಾಗಿರಿಸಿಕೊಂಡು ಜ್ಞಾನಭಂಡಾರವನ್ನು ಹೆಚ್ಚಿಸುತ್ತಾ ಬೇರೆಯವರಿಗೂ ಅದನ್ನು ಪಸರಿಸಬೇಕು ಎಂದರು. ಈ ಸಂದರ್ಭದಲ್ಲಿ ಶಾಖಾ ಪ್ರಬಂಧಕ ಗುರುರಾಜ್ ಅವಭೃತ, ಉಪ ಶಾಖಾ ಪ್ರಬಂಧಕ ಸತ್ಯ ಗಣೇಶ್, ಸಂಸ್ಥೆಯ ಮಾನವ ಸಂಪನ್ಮೂಲ ಪ್ರಬಂಧಕ ಶ್ಯಾಮಮೂರ್ತಿ, ಸಂಸ್ಥೆಯ ಸಾಫ್ಟ್ವೇರ್ ಪ್ರಬಂಧಕ ರವೀಶ್, ಪ್ರೊಕ್ಯೂರ್ಮೆಂಟ್ ಪ್ರಬಂಧಕ ಪ್ರಶಾಂತ್, ಮಾರುಕಟ್ಟೆ ವಿಭಾಗದ ಸಂಜೀವ ಅವರು ಉಪಸ್ಥಿತರಿದ್ದರು. ಗುರುರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಿಬ್ಬಂದಿ ರಮೇಶ್ ವಂದಿಸಿದರು. ಸಿಬ್ಬಂದಿ ದೀಪಿಕಾ ನಿರೂಪಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!