Home › ವಿದ್ಯುತ್ ವಿತರಣಾ ಕಂಪನಿ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ: ನಾಳೆ ಯಾವುದೇ ಸಮಸ್ಯೆಯಾದರೂ ಸ್ಪಂದಿಸದೇ ಇರಲು ಸಿಬ್ಬಂದಿ ನಿರ್ಧಾರ: ಬೆಳಗ್ಗೆ 8:30 ರಿಂದ ಸಂಜೆ 5:30ರವರೆಗೆ ಬೆಳ್ತಂಗಡಿಯಲ್ಲೂ ಪ್ರತಿಭಟನೆ
ವಿದ್ಯುತ್ ವಿತರಣಾ ಕಂಪನಿ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ: ನಾಳೆ ಯಾವುದೇ ಸಮಸ್ಯೆಯಾದರೂ ಸ್ಪಂದಿಸದೇ ಇರಲು ಸಿಬ್ಬಂದಿ ನಿರ್ಧಾರ: ಬೆಳಗ್ಗೆ 8:30 ರಿಂದ ಸಂಜೆ 5:30ರವರೆಗೆ ಬೆಳ್ತಂಗಡಿಯಲ್ಲೂ ಪ್ರತಿಭಟನೆ
ONLINE PUDU / Monday, August 09, 2021
ಬೆಳ್ತಂಗಡಿ: ಕೇಂದ್ರ ಸರ್ಕಾರ ರೂಪಿಸಿರುವ 2021ರ ಕೇಂದ್ರ ವಿದ್ಯುತ್ ತಿದ್ದುಪಡಿ ಮಸೂದೆ ವಿರೋಧಿಸಿ ಅಗಸ್ಟ್ 10ರಂದು ನಾಳೆ ದೇಶದ್ಯಾಂತ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಎರಡೂ ವಿಭಾಗಗಳಾದ ಉಜಿರೆ ಮತ್ತು ಬೆಳ್ತಂಗಡಿಯಲ್ಲೂ ಪ್ರತಿಭಟನೆ ಬೆಳಿಗ್ಗೆ 8:30 ರಿಂದ ಸಂಜೆ 5:30ರವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಅದ್ದರಿಂದ ನಾಳೆ ವಿದ್ಯುತ್ ಸಮಸ್ಯೆ ಆದಲ್ಲಿ ಸರ್ಕಾರವೇ ನೇರ ಹೊಣೆ ಎಂಬ ಸಂದೇಶವನ್ನೂ ಈಗಾಗಲೇ ಮೆಸ್ಕಾಂ ಸಿಬ್ಬಂದಿಗಳು ನೀಡಿದ್ದು, ಯಾವುದೇ ಸಮಸ್ಯೆಯಾದರೂ ಸ್ಪಂದಿಸದೇ ಇರಲು ನಿರ್ಣಯಿಸಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳ ಪ್ರತಿಭಟನೆಯಿಂದ ತಾಲೂಕಿನಲ್ಲಿಯೂ ನಾಳೆ ಸಾರ್ವಜನಿಕರಿಗೆ ಸ್ವಲ್ಪ ತೊಂದರೆಯಾಗಲಿದೆ.