ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸುಲ್ಕೇರಿ ನಾಪತ್ತೆಯಾದ ಮಗುವಿನ ಶವ ನದಿಯಲ್ಲಿ ಪತ್ತೆ.

ಸುಲ್ಕೇರಿ ನಾಪತ್ತೆಯಾದ ಮಗುವಿನ ಶವ ನದಿಯಲ್ಲಿ ಪತ್ತೆ.

ಬೆಳ್ತಂಗಡಿ: ಸುಲ್ಕೇರಿ ಬಳಿಯ ಜಂತಿಗೋಳಿ ಬಳಿ ಮನೆಯಲ್ಲಿ ಆಟವಾಡುತ್ತಿದ್ದ ಸುಮಾರು ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗು ಅಗಸ್ಟ್ 10 ಮಂಗಳವಾರ ನಾಪತ್ತೆಯಾಗಿದ್ದು ಬುಧವಾರ ಬೆಳಿಗ್ಗೆ  ಸಮೀಪದ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಜಂತಿಗೋಳಿ ಬಳಿಯ ಪರಾರಿ ಎಂಬಲ್ಲಿನ ಸುಭಾಶ್-ಸುಚಿತ್ರಾ ಎಂಬುವರ ಪುತ್ರಿ ದೃತ್ವಿ ಯನ್ನು ಮನೆಯಲ್ಲಿ ಅಜ್ಜನ ಜೊತೆ ಬಿಟ್ಟು, ತಾಯಿ ಹಾಗೂ ಅಜ್ಜಿ ಹುಲ್ಲು ತರಲು ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ಹಿಂಬಲಿಸಿಕೊಂಡು ಮಗು ಹೋಗಿ ಸಮೀಪದಲ್ಲೇ ಹರಿಯುತ್ತಿರುವ ನದಿ ಕಡೆಗೆ ಹೋಗಿರುವ ಸಂಶಯದಲ್ಲಿ ನಿನ್ನೆಯಿಂದ ಮಗುವಿಗಾಗಿ  ಅಗ್ನಿಶಾಮಕ ದಳ, ಎನ್ಡಿ ಆರ್ಎಫ್  ಹಾಗೂ ಸ್ಥಳೀಯರ ಸಹಕಾರದಲ್ಲಿ  ಹುಡುಕಾಟ ನಡೆಸಲಾಗಿತ್ತು.

ಅದರೆ ನಿನ್ನೆ ರಾತ್ರಿಯಾದ್ದರಿಂದ ಇವತ್ತು ಬೆಳಿಗ್ಗೆ ಹುಡುಕಾಟ ಪ್ರಾರಂಭಿಸಿದಾಗ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!