ಎರಡು ತಿಂಗಳ ಹಿಂದೆ ಮುಂಡಾಜೆ,ಚಿಬಿದ್ರೆ, ಕಡಿರುದ್ಯಾವರ ತೋಟತ್ತಾಡಿ,ನೆರಿಯ, ಚಾರ್ಮಾಡಿ ಮೊದಲಾದ ಗ್ರಾಮಗಳ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗ ಹಾಗೂ ಕಾಡಾನೆಗಳ ಹಿಂಡು ಅನೇಕರ ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ನಷ್ಟ ಉಂಟಾಗಿತ್ತು.
ಬಳಿಕ ಇತ್ತೀಚಿನ ದಿನಗಳಲ್ಲಿ ಚಾರ್ಮಾಡಿ ಘಾಟಿ ಸನಿಹದ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಡಾನೆಗಳಿಂದ ಭಾರಿ ಪ್ರಮಾಣದ ಕೃಷಿ ಹಾನಿ ಉಂಟಾಗಿತ್ತು.ಈಗ ಇದೇ ಆನೆಗಳ ಹಿಂಡು ಚಾರ್ಮಾಡಿ ಕಡೆ ಬಂದಿರುವ ಕುರಿತು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.