ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶಾಸಕ‌ ಹರೀಶ್ ಪೂಂಜರಿಂದ ಪೂರ್ಣಾಂಕ ಗಳಿಸಿದ ವಿದ್ಯಾರ್ಥಿನಿ ಸಂಯುಕ್ತ ಪ್ರಭುಗೆ ಗೌರವಾರ್ಪಣೆ

ಶಾಸಕ‌ ಹರೀಶ್ ಪೂಂಜರಿಂದ ಪೂರ್ಣಾಂಕ ಗಳಿಸಿದ ವಿದ್ಯಾರ್ಥಿನಿ ಸಂಯುಕ್ತ ಪ್ರಭುಗೆ ಗೌರವಾರ್ಪಣೆ

ಬೆಳ್ತಂಗಡಿ: ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಬೆಳ್ತಂಗಡಿ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂ. ಸಂಯುಕ್ತ ಡಿ. ಪ್ರಭು ಅವರನ್ನು ಶಾಸಕ ಹರೀಶ್ ಪೂಂಜ ಅವರು ಬುಧವಾರ ಆಕೆಯ ಮನೆಗೆ ತೆರಳಿ ಶುಭಾಶಯ ತಿಳಿಸಿ, ಅಭಿನಂದಿಸಿದರು.

ತಾಲೂಕಿಗೆ ಕೀರ್ತಿ ತಂದ ಸಂಯುಕ್ತ ಪ್ರಭುವಿಗೆ ಶುಭಾಶಯ ಕೋರಿ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಶಾಸಕರು ಶುಭ ಹಾರೈಸಿದರು.

ಸಂಯುಕ್ತ ಪ್ರಭು ಪೋಷಕರಾದ ದಾಮೋದರ ಪ್ರಭು, ಡಾ. ಅರ್ಚನ ಪ್ರಭು ಹಾಗೂ ಮನೆಯವರು ಇದ್ದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ. ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಹಾಬಲ ಗೌಡ, ಮಂಡಲ ಸೋಷಿಯಲ್ ಮೀಡಿಯ ಸಂಚಾಲಕ ಸುಪ್ರೀತ್ ಜೈನ್, ಉದ್ಯಮಿ ಬಾಲಕೃಷ್ಣ ಗೌಡ ಬಿರ್ಮೋಟ್ಟು, ವಿನೋದ್ ಕಲ್ಮಂಜ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ವಿರೂಪಾಕ್ಷಪ್ಪ, ಕ್ಷೇತ್ರ ಸಮಸ್ವಯಾಧಿಕಾರಿ ಶಂಭುಶಂಕರ್, ಕ್ಷೇತ್ರ ಸಂಯೋಜಕ ಸುಭಾಶ್ ಜಾಧವ್ ಮೊದಲಾದವರು ಇದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!