ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸುಲ್ಕೇರಿ ಬಳಿ ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗು ನಾಪತ್ತೆ: ಮನೆಯಲ್ಲಿದ್ದ ತಾಯಿ, ಅಜ್ಜಿ ಹುಲ್ಲು ತರಲು ತೆರಳಿದ್ದ ವೇಳೆ ನಡೆದ ಘಟನೆ: ಸ್ಥಳೀಯರಿಂದ ಮಗುವಿಗಾಗಿ ಹುಡುಕಾಟ, ಸುರಕ್ಷಿತವಾಗಿ ತಾಯಿಯ ‌ಮಡಿಲು ಸೇರಲು ಪ್ರಾರ್ಥನೆ

ಸುಲ್ಕೇರಿ ಬಳಿ ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗು ನಾಪತ್ತೆ: ಮನೆಯಲ್ಲಿದ್ದ ತಾಯಿ, ಅಜ್ಜಿ ಹುಲ್ಲು ತರಲು ತೆರಳಿದ್ದ ವೇಳೆ ನಡೆದ ಘಟನೆ: ಸ್ಥಳೀಯರಿಂದ ಮಗುವಿಗಾಗಿ ಹುಡುಕಾಟ, ಸುರಕ್ಷಿತವಾಗಿ ತಾಯಿಯ ‌ಮಡಿಲು ಸೇರಲು ಪ್ರಾರ್ಥನೆ

ಬೆಳ್ತಂಗಡಿ: ಸುಲ್ಕೇರಿ ಬಳಿಯ ಜಂತಿಗೋಳಿ ಬಳಿ ಮನೆಯಲ್ಲಿ ಆಟವಾಡುತ್ತಿದ್ದ ಸುಮಾರು ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗು ನಾಪತ್ತೆಯಾಗಿದ್ದು, ಸ್ಥಳೀಯರಿಂದ ಹುಡುಕಾಟ ಕಾರ್ಯ ನಡೆದಿದೆ.

ಜಂತಿಗೋಳಿ ಬಳಿಯ ಮನೆಯೊಂದರಲ್ಲಿ ಸುಮಾರು ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗುವನ್ನು ಅಜ್ಜನ ಜೊತೆ ಬಿಟ್ಟು, ತಾಯಿ ಹಾಗೂ ಅಜ್ಜಿ ಹುಲ್ಲು ತರಲು ತೆರಳಿದ್ದರು. ಮನೆಯ ಸಮೀಪದಲ್ಲಿ ನದಿ ಇದ್ದು, ಒಂದು ವೇಳೆ ಮಗುವಿನ ತಾಯಿ ಹಾಗೂ ಅಜ್ಜಿ ಹುಲ್ಲು ತೆರಳಿದ್ದ ಸಂದರ್ಭದಲ್ಲಿ ಅವರನ್ನು ದೂರದಿಂದ ಹಿಂಬಾಲಿಸಿಕೊಂಡು ಬಂದು ನದಿಗೆ ಇಳಿದಿದೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಮಾಹಿತಿ ತಿಳಿದ ಕೂಡಲೇ ಮಗುವಿಗಾಗಿ ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ಮಗು ಸುರಕ್ಷಿತವಾಗಿ ತಾಯಿಯ ಮಡಿಲು ಸೇರಲಿ ಎಂದು ಜನತೆ ಪ್ರಾರ್ಥನೆ ನಡೆಸುತ್ತಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!