Home › ಕಳೆಂಜ, ಸರಕಾರಿ ಜಾಗದಲ್ಲಿ ಕಾಡುಹಂದಿ ಬೇಟೆ ಆರೋಪ: ಆರೋಪಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು, ಕೋವಿ ವಶಕ್ಕೆ
ಕಳೆಂಜ, ಸರಕಾರಿ ಜಾಗದಲ್ಲಿ ಕಾಡುಹಂದಿ ಬೇಟೆ ಆರೋಪ: ಆರೋಪಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು, ಕೋವಿ ವಶಕ್ಕೆ
ONLINE PUDU / Wednesday, August 11, 2021
ಬೆಳ್ತಂಗಡಿ: ಕಾಡು ಹಂದಿ ಬೇಟೆ ಸಂದರ್ಭದಲ್ಲಿ ಹಂದಿಯೊಂದಕ್ಕೆ ಗುಂಡು ಹೊಡೆದ ಶಬ್ದ ಕೇಳಿ ಬಂದ ಹಿನ್ನೆಲೆ ಅರಣ್ಯ ಸಿಬ್ಬಂದಿ ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ನೋಡಿ ಕೋವಿ ಮತ್ತು ಮದ್ದುಗುಂಡುಗಳನ್ನು ಬಿಸಾಡಿ ವ್ಯಕ್ತಿಯೊಬ್ಬರು ಪರಾರಿಯಾದ ಘಟನೆ ತಾಲೂಕಿನ ಕಳೆಂಜ ಗ್ರಾಮದಲ್ಲಿ ನಡೆದಿದೆ.
ಕಳೆಂಜದ ಕುಡ್ತಲಾಜೆ ಸರಕಾರಿ ಜಾಗದಲ್ಲಿ ಹಂದಿಗೆ ಗುಂಡು ಹೊಡೆದ ಸಂದರ್ಭದಲ್ಲಿ ಗುಂಡಿನ ಶಬ್ದ ಕೇಳಿ ಸಮೀಪದಲ್ಲೇ ಗಸ್ತು ತಿರುಗುತಿದ್ದ ಅರಣ್ಯಾಧಿಕಾರಿಗಳು ಹೋಗಿ ನೋಡಿದಾಗ ಸುಜಯ್ ಗೌಡ ಎಂಬ ವ್ಯಕ್ತಿ ಕೈಯಲ್ಲಿದ್ದ ಕೋವಿಯನ್ನು ಎಸೆದು ಪರಾರಿಯಾಗಿದ್ದು ಸ್ಥಳದಲ್ಲಿ ಸತ್ತು ಬಿದ್ದ ಕಾಡು ಹಂದಿ ಹಾಗೂ 3 ಸಜೀವ ಮದ್ದುಗುಂಡು ಪತ್ತೆಯಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ವಲಯ ಕಛೇರಿಯಲ್ಲಿ ಪ್ರಕರಣ ದಾಖಲಿಸಿ ಸ್ಥಳದಲ್ಲಿ ಸಿಕ್ಕಿದ ಕೋವಿ ಹಾಗೂ ಮದ್ದು ಗುಂಡುಗಳನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿ ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.