ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬಹು ಬೇಡಿಕೆಯ ತಿಮಿಂಗಿಲ ವಾಂತಿ ಅಕ್ರಮ ಸಾಗಾಟ ನಾಲ್ಕು ಮಂದಿಯ ಬಂಧನ

ಬಹು ಬೇಡಿಕೆಯ ತಿಮಿಂಗಿಲ ವಾಂತಿ ಅಕ್ರಮ ಸಾಗಾಟ ನಾಲ್ಕು ಮಂದಿಯ ಬಂಧನ

ಮೈಸೂರು: ಅಕ್ರಮವಾಗಿ ವಿದೇಶಗಳಲ್ಲಿ ಬಹು ಬೇಡಿಕೆಯಿರುವ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ. ಬಂಧಿತರು ಸಮುದ್ರದಲ್ಲಿ ಅಪರೂಪಕ್ಕೆ ಸಿಗುವ ತಿಮಿಂಗಿಲದ ವಾಂತಿ (ಅಂಬ್ರಗ್ರಿಸ್ )ಯನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ.

ಕೊಡಗಿನ ಕೆ.ಎ.ಇಬ್ರಾಹಿಂ, ರಫೀಕ್, ಎಮ್.ಎ.ತಾಹೀರ್ ನಕಾಷ್ ಮತ್ತು ಕೇರಳದ ಕಣ್ಣೂರು ಜಿಲ್ಲೆಯ ಕೆ.ಎಂ ಜಾರ್ಜ್ ಬಂಧಿತ ಆರೋಪಿಗಳಾಗಿದ್ದು, ಪ್ರಮುಖ ಆರೋಪಿ ಕೊಡಗಿನ ರಿಯಾಜ್ ತಲೆಮರೆಸಿಕೊಂಡಿದ್ದಾನೆ.

ಏನಿದು ತಿಮಿಂಗಿಲದ ವಾಂತಿ?

ಸಮುದ್ರದಲ್ಲಿ ತಿಮಿಂಗಿಲವು ಜೀರ್ಣವಾಗದೇ ಉಳಿದ ವಸ್ತುವನ್ನು ಬಹಳ‌ದಿನಗಳ‌ ನಂತರ ವಾಂತಿ ಮಾಡುತ್ತದೆ. ಅದು ಘನ‌ ಮೇಣದ ವಸ್ತುವಿನ ರೂಪದಲ್ಲಿ ಇರುತ್ತದೆ. ಬಹಳ ದಿನಗಳ ನಂತರ ಈ ವಾಂತಿಯು ಸಮುದ್ರದ ದಡಕ್ಕೆ ಬಂದು ಸೇರುತ್ತದೆ.‌ ಆ ಸಂದರ್ಭದಲ್ಲಿ ಇದನ್ನು ತೆಗೆದುಕೊಂಡು ಬರುತ್ತಾರೆ.

ಈ ತಿಮಿಂಗಿಲ ವಾಂತಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದ್ದು, ಸುಗಂಧ ದ್ರವ್ಯ ಹಾಗೂ ಕೆಲವು ಔಷಧ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ. ಇಂತಹ ಅಪರೂಪದ ತಿಮಿಂಗಿಲದ ವಾಂತಿಯನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದಾರೆ ಎಂಬ‌ ಮಾಹಿತಿ ಹಿನ್ನೆಲೆಯಲ್ಲಿ ‌ಮೈಸೂರಿನ‌ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕುಶಾಲನಗರ ಬಳಿ ಕಾರ್ಯಾಚರಣೆ ನಡೆಸಿ 8 ಕೆ.ಜಿ. ತೂಕದ ತಿಮಿಂಗಿಲದ ವಾಂತಿ ವಶಪಡಿಸಿಕೊಂಡಿದ್ದು ಅದರಲ್ಲಿ ನಾಲ್ವರು‌ ಆರೋಪಿಗಳನ್ನು ಬಂಧಿಸಿದ್ದು ಪ್ರಮುಖ ಆರೋಪಿ ರಿಯಾಜ್ ಪರಾರಿಯಾಗಿದ್ದಾನೆ, ಆತನ ಪತ್ತೆಗಾಗಿ ಅರಣ್ಯ ಅಧಿಕಾರಿಗಳು ಬಲೆ‌ ಬೀಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!