ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಿದ್ಯಾದೇಗುಲದಲ್ಲಿ ದ್ವೇಷದ ಭಾಷಣ ಸಲ್ಲದು; ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಿ, ದ್ವೇಷವನ್ನಲ್ಲ: ರಕ್ಷಿತ್ ಶಿವರಾಂ ಶಾಲೆಗಳು ರಾಜಕೀಯ ಪ್ರಚಾರದ ವೇದಿಕೆಗಳಲ್ಲ, ಭವಿಷ್ಯ ರೂಪಿಸುವ ಜ್ಞಾನದ ಮಂದಿರಗಳು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.

ವಿದ್ಯಾದೇಗುಲದಲ್ಲಿ ದ್ವೇಷದ ಭಾಷಣ ಸಲ್ಲದು; ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಿ, ದ್ವೇಷವನ್ನಲ್ಲ: ರಕ್ಷಿತ್ ಶಿವರಾಂ ಶಾಲೆಗಳು ರಾಜಕೀಯ ಪ್ರಚಾರದ ವೇದಿಕೆಗಳಲ್ಲ, ಭವಿಷ್ಯ ರೂಪಿಸುವ ಜ್ಞಾನದ ಮಂದಿರಗಳು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.

 

ಬೆಳ್ತಂಗಡಿ: ಶಾಲೆ ಎನ್ನುವುದು ಮಕ್ಕಳಿಗೆ ಜ್ಞಾನ, ಸಂಸ್ಕಾರ, ಮಾನವೀಯತೆ ಮತ್ತು ಸಹಬಾಳ್ವೆಯ ಪಾಠ ಕಲಿಸುವ ಪವಿತ್ರ ಸ್ಥಳವೇ ಹೊರತು, ಯಾವುದೇ ರಾಜಕೀಯ ಪಕ್ಷದ ಪ್ರಚಾರ ವೇದಿಕೆಯಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




ಪುಂಜಾಲಕಟ್ಟೆ ಶಾಲಾ ಆವರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನಡೆಸಿದ ರಾಜಕೀಯ ಪ್ರೇರಿತ ಭಾಷಣ ದ್ವೇಷ ಭಾವನೆಯಿಂದ ಕೂಡಿದೆ ಎಂದು ಆರೋಪಿಸಿರುವ ಅವರು, ಶಾಲಾ ಮಕ್ಕಳ ಮುಂದೆ ವಿರೋಧ ಪಕ್ಷದ ವಿರುದ್ಧ ದ್ವೇಷದ ಮಾತುಗಳನ್ನಾಡುವುದು ಯಾವ ಸಂಸ್ಕಾರ ಮತ್ತು ರಾಜಕೀಯ ಪ್ರಬುದ್ಧತೆಯ ಸಂಕೇತ ಎಂದು ಪ್ರಶ್ನಿಸಿದ್ದಾರೆ.


ಮಕ್ಕಳ ಕೈಯಲ್ಲಿ ಪುಸ್ತಕಗಳಿರಬೇಕೇ ಹೊರತು ರಾಜಕೀಯ ದ್ವೇಷದ ವಿಷಬೀಜಗಳಲ್ಲ. ಅವರ ಮನಸ್ಸಿನಲ್ಲಿ ಪ್ರಶ್ನಿಸುವ ಜಿಜ್ಞಾಸೆ, ಪ್ರೀತಿಸುವ ಹೃದಯ ಮತ್ತು ಭವಿಷ್ಯದ ಕನಸುಗಳು ಬೆಳೆಯಬೇಕೇ ಹೊರತು ಪಕ್ಷಪಾತದ ಮನೋಭಾವವಲ್ಲ.



ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅಂತಹ ಭಿನ್ನಾಭಿಪ್ರಾಯಗಳನ್ನು ಶಾಲಾ ಮಕ್ಕಳ ಮನಸ್ಸಿನಲ್ಲಿ ತುಂಬುವ ಹಕ್ಕು ಯಾರಿಗೂ ಇಲ್ಲ. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಜ್ಞಾನ, ಮೌಲ್ಯಗಳು ಮತ್ತು ಮಾನವೀಯತೆಯನ್ನು ಕಲಿಸುವ ಕೇಂದ್ರಗಳಾಗಿರಬೇಕು.

ಶಾಲೆಗಳು ರಾಜಕೀಯ ದ್ವೇಷ ಬಿತ್ತುವ ಜಾಗಗಳಲ್ಲ, ಅವು ಭವಿಷ್ಯದ ಭಾರತವನ್ನು ಕಟ್ಟುವ ದೇವಾಲಯಗಳು. ರಾಜಕೀಯ ಲಾಭಕ್ಕಾಗಿ ಮಕ್ಕಳ ಭವಿಷ್ಯವನ್ನು ಬಲಿಕೊಡದೆ ಶಾಲಾ ಆವರಣದ ಪಾವಿತ್ರ್ಯವನ್ನು ಕಾಪಾಡಬೇಕು. ಮಕ್ಕಳಿಗೆ ಶಿಕ್ಷಣ ನೀಡಿ, ದ್ವೇಷವನ್ನಲ್ಲ ಎಂದು ರಕ್ಷಿತ್ ಶಿವರಾಂ ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!