ಅದೇ ರೀತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ ಬಂಪರ್ ಕೊಡುಗೆಯನ್ನು ಘೋಷಿಸಿದೆ. ಕೆ.ಎಸ್.ಆರ್.ಟಿ.ಸಿಯು 60 ವರ್ಷ ಪೊರೈಸಿರುವ ಸವಿನೆನಪಿನಲ್ಲಿ ನೀರಜ್ ಚೋಪ್ರಾ ಅವರಿಗೆ ಕೆಎಸ್ ಆರ್ ಟಿಸಿ ಗೋಲ್ಡನ್ ಪಾಸ್ ನೀಡಲಾಗುವುದು. ಅವರಿಗೆ ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತರ್ ರಾಜ್ಯ ಬಸ್ಸ್ ಗಳಲ್ಲಿ ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಕೆಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೆಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.
Home › ಚಿನ್ನದ ಹುಡುಗನಿಗೆ ರಾಜ್ಯ ಸಾರಿಗೆ ಸಂಸ್ಥೆಯಿಂದ ಬಂಪರ್ ಕೊಡುಗೆ