ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಿಲಿಗೂಡು ಸ.ಹಿ.ಪ್ರಾ. ಶಾಲೆಯಲ್ಲಿ ಶ್ರೀ ಮಹಮ್ಮಾಯಿ ಸ್ವಸಹಾಯ ಸಂಘದಿಂದ 'ಪೋಷಣಾ ಅಭಿಯಾನ'ದಡಿ ಶ್ರಮದಾನ

ಪಿಲಿಗೂಡು ಸ.ಹಿ.ಪ್ರಾ. ಶಾಲೆಯಲ್ಲಿ ಶ್ರೀ ಮಹಮ್ಮಾಯಿ ಸ್ವಸಹಾಯ ಸಂಘದಿಂದ 'ಪೋಷಣಾ ಅಭಿಯಾನ'ದಡಿ ಶ್ರಮದಾನ

 

 

ಪಿಲಿಗೂಡು: ಶ್ರೀ ಮಹಮ್ಮಾಯಿ ಸ್ವಸಹಾಯ ಸಂಘ ಪಿಲಿಗೂಡು-ಗುಂಪಕಲ್ಲು, ಅಂದ್ರೊಟ್ಟು-ನಡುಗುಡ್ಡೆ ವತಿಯಿಂದ ಸಂಘ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆ ಪೋಷಣಾ ಅಭಿಯಾನದಡಿ ಸೆ.12ರಂದು ಸಂಘದ ಸದಸ್ಯರಿಂದ ಪಿಲಿಗೂಡು ಸ.ಹಿ.ಪ್ರಾ. ಶಾಲೆಯ ಗದ್ದೆಯಲ್ಲಿ ಶ್ರಮದಾನ ನಡೆಯಿತು. ಶಾಲಾ ಮಕ್ಕಳ ಅಭಿವೃದ್ಧಿ ಉದ್ದೇಶದಿಂದ ಗದ್ದೆಯನ್ನು ಸ್ವಚ್ಛಗೊಳಿಸಿ, ತರಕಾರಿ ಬೆಳೆಸಲು ಅನುಕೂಲವಾಗುವಂತೆ ಗದ್ದೆ ಸಿದ್ಧಗೊಳಿಸಲು ಉದ್ದೇಶಿಸಲಾಗಿದ್ದು ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಹಮ್ಮಾಯಿ ಸ್ವಸಹಾಯ ಸಂಘ ಪಿಲಿಗೂಡು-ಗುಂಪಕಲ್ಲು ಅಧ್ಯಕ್ಷ ಬಾಲಕೃಷ್ಣ ಗುಂಪಕಲ್ಲು, ಅಂದ್ರೊಟ್ಟು-ನಡುಗುಡ್ಡೆ ಸಂಘದ ಅಧ್ಯಕ್ಷ ಲಕ್ಷ್ಮಣ್ ಅಂದ್ರೊಟ್ಟು, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅನಿತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಸಂಘದ ಸದಸ್ಯರಾದ ಭುವನೇಶ್ವರ ಜಿ., ಅಶೋಕ್ ನಡುಗುಡ್ಡೆ, ಯೋಗೀಶ್ ನಡುಗುಡ್ಡೆ, ಹರ್ಷಿತ್ ಪಿಂಡಿವನ, ಶರತ್ ಕುಮಾರ್ ಕಣಿಯೂರು, ಯತೀಶ್ ಅಂದ್ರೊಟ್ಟು, ನವೀನ್, ಮೋಕ್ಷಿತ್, ಜತನ್ ಹಾಗೂ ಸ್ಥಳೀಯರಾದ ಶಿವಣ್ಣ ಗೌಡ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!