ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ ನಿಧನಕ್ಕೆ ಕಂಬನಿ ಮಿಡಿದ ಮಾಜಿ ಶಾಸಕ ವಸಂತ ಬಂಗೇರ. ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿದಾನ ಪೊರೈಸುವಂತೆ ಅಧಿಕಾರಿಗಳಿಗೆ ಮನವಿ.

ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ ನಿಧನಕ್ಕೆ ಕಂಬನಿ ಮಿಡಿದ ಮಾಜಿ ಶಾಸಕ ವಸಂತ ಬಂಗೇರ. ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿದಾನ ಪೊರೈಸುವಂತೆ ಅಧಿಕಾರಿಗಳಿಗೆ ಮನವಿ.

 

 

 

ಬೆಳ್ತಂಗಡಿ:ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತಾಲ್ಲೂಕಿನ ಹಿರಿಯ ಜೀವ ಪಡಂಗಡಿ ಬೋಜರಾಜ ಹೆಗ್ಡೆರವರ ನಿಧನ ತಾಲ್ಲೂಕಿನ ಸಮಸ್ತರಿಗೂ ದುಃಖವನ್ನು ನೀಡಿದೆ.99 ವರ್ಷಗಳ ಸಾರ್ಥಕ ಬಾಳ್ವೆ ನಡೆಸಿ ಹೋರಾಟದ ಹಾಗೂ ಸಾಮಾಜಿಕ ಕಾಳಜಿಯ ಮೌಲ್ಯಗಳನ್ನು ಸಮಾಜದ ಯುವ ಪೀಳಿಗೆಗೆ ಧಾರೆಯೆರೆದಿರುವ ಅವರ ಜೀವನ ಎಲ್ಲರಿಗೂ ಆದರ್ಶವಾಗಿರಲಿ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಕಂಬನಿ‌ ಮಿಡಿದಿದ್ದಾರೆ. ಬೋಜರಾಜ ಹೆಗ್ಡೆಯವರ ಮನೆಗೆ ಈಗಾಗಲೇ ಭೇಟಿ ನೀಡಿರುವ ವಸಂತ ಬಂಗೇರ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಬೋಜರಾಜ ಹೆಗ್ಡೆ ಅವರ ಅಂತಿಮ ವಿಧಿವಿದಾನವನ್ನು ಸರ್ಕಾರಿ ಗೌರವದೊಂದಿಗೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿ ಈ ಬಗ್ಗೆ ತಹಶೀಲ್ದಾರ್ ಹಾಗೂ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!