ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹಗಲಿನಲ್ಲೇ ನಡೆಯಿತು ಕಳ್ಳತನ!, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕನ್ನ ಹಾಕಿದ ಖದೀಮರು: ಚಿನ್ನಾಭರಣ, ನಗದಿನೊಂದಿಗೆ ಕಳ್ಳರು ಪರಾರಿ, ಮನೆ ಮಾಲೀಕ‌ ಪಕ್ಕದ ತೋಟದಲ್ಲೇ ಇದ್ದರೂ ಅರಿವಾಗದ ಕೃತ್ಯ!

ಹಗಲಿನಲ್ಲೇ ನಡೆಯಿತು ಕಳ್ಳತನ!, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕನ್ನ ಹಾಕಿದ ಖದೀಮರು: ಚಿನ್ನಾಭರಣ, ನಗದಿನೊಂದಿಗೆ ಕಳ್ಳರು ಪರಾರಿ, ಮನೆ ಮಾಲೀಕ‌ ಪಕ್ಕದ ತೋಟದಲ್ಲೇ ಇದ್ದರೂ ಅರಿವಾಗದ ಕೃತ್ಯ!

 

 

 

ಬಂಗಾಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಹಾಡು ಹಗಲೇ ಮನೆಯೊಂದರಿಂದ ನಗದು ಸಹಿತ ಚಿನ್ನಾಭರಣವನ್ನು ಕಳವುಗೈದ ಘಟನೆ ತಾಲೂಕಿನ ಇಂದಬೆಟ್ಟು ಎಂಬಲ್ಲಿ ಅ 31 ರಂದು ನಡೆದಿದೆ.

ಇಂದಬೆಟ್ಟು ಗ್ರಾಮದ ಬಂಗಾಡಿ ಸಮೀಪದ ದೇರಾಜೆ ಎಂಬಲ್ಲಿಯ ನಿವಾಸಿ ಮಹಮ್ಮದ್ ಎಂಬವರ ಮನೆಯಿಂದ ಈ ಭಾರಿ ಮೊತ್ತದ ಚಿನ್ನಾಭರಣ ಕಳವು ಆಗಿದ್ದು,

5000 ರೂ ನಗದು ಸಹಿತ ಅಂದಾಜು ಸುಮಾರು 12.5 ಲಕ್ಷ ರೂಪಾಯಿ ಮೌಲ್ಯದ  ಚಿನ್ನಾಭರಣ ಕಳವು ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಮಹಮ್ಮದ್ ಅವರು ಕೃಷಿ ಜೊತೆಗೆ ಅಡಿಕೆ ವ್ಯಾಪಾರ ಮಾಡುತಿದ್ದು ಅ. 31 ರಂದು ಬೆಳಗ್ಗೆ ಅವರ ಪತ್ನಿ ಇಬ್ಬರು ಮಕ್ಕಳೊಂದಿಗೆ,  ತಮ್ಮನ ಮದುವೆ ನಿಶ್ಚಿತಾರ್ಥಕ್ಕಾಗಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮಕ್ಕೆ ತೆರಳಿದ್ದರು.

ಮನೆಯಲ್ಲಿ ಮಹಮ್ಮದ್ ಒಬ್ಬರೇ ಇದ್ದು, , ಅಲ್ಲೆ ಹತ್ತಿರದ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯುವ ಕೆಲಸಕ್ಕೆ ಹೋಗಿದ್ದರು. ಸಂಜೆ ಬಂಟ್ವಾಳ ನಿಶ್ಚಿತಾರ್ಥಕ್ಕೆ ಹೋಗಿದ್ದ ಪತ್ನಿ ವಾಪಾಸ್ಸು ಮನೆಗೆ ಬಂದಾಗ, ಕಪಾಟಿನಲ್ಲಿ ಇಟ್ಟಿದ್ದ ಮೊಬೈಲ್ ಅಲ್ಲೇ ಪಕ್ಕದಲ್ಲಿ ಚೇರ್ ಮೇಲೆ ಇರುವುದನ್ನು ಕಂಡು ಗಾಬರಿಯಿಂದ ಕಳವು ಆಗಿರಬಹುದೆಂದು ಗಂಡನನ್ನು ಕರೆದು ನೋಡಿದಾಗ ಕಪಾಟಿನ ಬಾಗಿಲು ಸ್ವಲ್ಪ ತೆರೆದಿದ್ದು ಅನುಮಾನಗೊಂಡು ನೋಡಿದಾಗ ಅದರ ಲಾಕರ್‌ನಲ್ಲಿ ಇರಿಸಿದ್ದ ನಗದು ಸಹಿತ ಚಿನ್ನಾಭರಣ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಹಮ್ಮದ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!