Home › ಹಾರಿಕಾ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು.ಡಿ13 ಶೌರ್ಯ ಸಂಚಲನ ಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಹೇಳನೆ ಆರೋಪ ಹಿನ್ನೆಲೆ
ಹಾರಿಕಾ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು.ಡಿ13 ಶೌರ್ಯ ಸಂಚಲನ ಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಹೇಳನೆ ಆರೋಪ ಹಿನ್ನೆಲೆ
ONLINE PUDU / Wednesday, December 22, 2021
ಬೆಳ್ತಂಗಡಿ: ಡಿ 13 ರಂದು ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ,ಮಾತೃಮಂಡಳಿ ,ದುರ್ಗಾ ವಾಹಿನಿ ಬೆಳ್ತಂಗಡಿ ಪ್ರಖಂಡ ಇದರ ನೇತೃತ್ವದಲ್ಲಿ ನಡೆದ ಶೌರ್ಯಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಮಾಡಿದ ದಿಕ್ಷೂಚಿ ಭಾಷಣದಲ್ಲಿ ಮಸಲ್ಮಾನರು ಮಸೀದಿಯಲ್ಲಿ 5 ಹೊತ್ತಿನ ನಮಾಜ್ ಗೆ ಆಹ್ವಾನ ಕೊಡುವ ಅಝಾನ್ ನಲ್ಲಿ ಕಾಫೀರ್ ( ಮುಸ್ಲಿಂಮೇತರ) ಕೊಲ್ಲಲು ಕರೆ ನೀಡುತಿದ್ದಾರೆ ಎಂದು ಉದ್ರೇಕಕಾರಿ ಭಾಷಣ ಮಾಡಿ ಮುಸ್ಲೀಂ ಸಮುದಾಯಕ್ಕೆ ಅವಹೇಳನೆ ಹಾಗೂ ಹಿಂದೂ ಭಾಂದವರನ್ನು ಮುಸ್ಲಿಂ ಸಮುದಾಯ ವಿರುದ್ಧ ಉದ್ರೇಕಿಸಲು ಪ್ರಚೋದನಕಾರಿಯಾಗಿ ಭಾಷಣ ಮಾಡಿ ಕೋಮುಧ್ವೇಷ ಮೂಡುವಂತೆ ಮಾಡಿದ್ದಾರೆ.ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಪಿಲಿಚಾಮುಂಡಿ ಕಲ್ಲು ನಿವಾಸಿ ಶಬ್ಬೀರ್ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.