ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವ್ಯಕ್ತಿಯೊಬ್ಬರಿಗೆ ದೊಣ್ಣೆಯಿಂದ ಹಲ್ಲೆ: ಗಾಯಗೊಂಡ ವ್ಯಕ್ತಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲು: ಜಾಗದ ವಿಚಾರದಲ್ಲಿ ಹಲ್ಲೆ ನಡೆಸಿದ ಆರೋಪ: ಕೊಯ್ಯೂರು ಸಮೀಪ ನಡೆದ ಘಟನೆ

ವ್ಯಕ್ತಿಯೊಬ್ಬರಿಗೆ ದೊಣ್ಣೆಯಿಂದ ಹಲ್ಲೆ: ಗಾಯಗೊಂಡ ವ್ಯಕ್ತಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲು: ಜಾಗದ ವಿಚಾರದಲ್ಲಿ ಹಲ್ಲೆ ನಡೆಸಿದ ಆರೋಪ: ಕೊಯ್ಯೂರು ಸಮೀಪ ನಡೆದ ಘಟನೆ

 

 

 

ಬೆಳ್ತಂಗಡಿ: ಕೊಯ್ಯೂರು,  ಸಮೀಪದ ಬೀಜದಡಿ ಎಂಬಲ್ಲಿಯ ನಿವಾಸಿಯೊಬ್ಬರಿಗೆ  ಜಮೀನು ವಿಚಾರವಾಗಿ‌ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೊಯ್ಯೂರು ಗ್ರಾಮದ ಬೀಜದಡಿ ಬಳಿ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ  ಪ್ರಮೋದ್ ಎಂಬಾತ ಸ್ಥಳೀಯ ನಿವಾಸಿ ವೆಂಕಪ್ಪ ಗೌಡ (40) ಅವರಿಗೆ ದೊಣ್ಣೆಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿರುವ ಕುರಿತು ಆರೋಪಿಸಲಾಗಿದೆ. ವೆಂಕಪ್ಪ ಅವರ ಮನೆಗೆ ಅಕ್ರಮ ಪ್ರವೇಶಗೈದ ಪ್ರಮೋದ್ ಹಲ್ಲೆ ನಡೆಸಿದ ಸಂದರ್ಭ ವೆಂಕಪ್ಪ ಅವರಿಗೆ ತಲೆಗೆ ಗಾಯವಾಗಿದ್ದು, ಅವರ ಬೊಬ್ಬೆ ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಇತ  ಈ ಹಿಂದೆ ವೆಂಕಪ್ಪ ಗೌಡ ಹಾಗೂ ಅವರ ಸಹೋದರನ ಮೇಲೆಯೂ ದಾಳಿ ನಡೆಸಿದ ಆರೋಪ ಎದುರಿಸುತ್ತಿರುವ ಕುರಿತು ಮಾಹಿತಿ ‌ಲಭಿಸಿದೆ. ಘಟನೆ ಬಗ್ಗೆ ಬೆಳ್ತಂಗಡಿ ಪೋಲಿಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!