ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಧನಕೀರ್ತಿ ಅರಿಗ ಧರ್ಮಸ್ಥಳ ಅವಿರೋಧ ಆಯ್ಕೆ: ಪತ್ರಕರ್ತರ ಭವನದಲ್ಲಿ 2022-23ರ ಅವಧಿಗೆ ಪದಾಧಿಕಾರಿಗಳ ಆಯ್ಕೆ

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಧನಕೀರ್ತಿ ಅರಿಗ ಧರ್ಮಸ್ಥಳ ಅವಿರೋಧ ಆಯ್ಕೆ: ಪತ್ರಕರ್ತರ ಭವನದಲ್ಲಿ 2022-23ರ ಅವಧಿಗೆ ಪದಾಧಿಕಾರಿಗಳ ಆಯ್ಕೆ

 

 

 

                       ಧನಕೀರ್ತಿ ಅರಿಗ                             ಅಧ್ಯಕ್ಷರು ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ 2022-23 ರ ಅವಧಿಗೆ ಅಧ್ಯಕ್ಷರಾಗಿ ಸಂಜೆವಾಣಿ ಪತ್ರಿಕೆಯ ವರದಿಗಾರ ಧನಕೀರ್ತಿ ಆರಿಗಾ ಧರ್ಮಸ್ಥಳ ಅವರು ಅವಿರೋಧವಾಗಿ ಆಯ್ಕೆಯಾದರು.

 

 

 

ಮಹಾ ಸಭೆ ಪತ್ರಿಕಾಭವನದಲ್ಲಿ ಪತ್ರಕರ್ತರ ಸಂಘದಲ್ಲಿ ಅಧ್ಯಕ್ಷ ಆಚುಶ್ರೀ ಬಾಂಗೇರು ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಜಾರಪ್ಪ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ಎಣಿಂಜೆ ಲೆಕ್ಕಪತ್ರ‌ ನೀಡಿದರು. ನೂತನ‌ ಪದಾಧಿಕಾರಿಗಳ ಪ್ರಕ್ರಿಯೆಯನ್ನು ಹಿರಿಯ ಪತ್ರಕರ್ತ ಆರ್.ಎನ್. ಪೂವಣಿ ನಡೆಸಿಕೊಟ್ಟರು‌.

 

 

                     ಚೈತ್ರೇಶ್ ಇಳಂತಿಲ                           ಕಾರ್ಯದರ್ಶಿ

 

ಪ್ರಧಾನ ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆ ವರದಿಗಾರ ಚೈತ್ರೇಶ್ ಇಳಂತಿಲ, ಕೋಶಾಧಿಕಾರಿಯಾಗಿ ಸಂಯುಕ್ತ ಕರ್ನಾಟಕ ವರದಿಗಾರ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ಗಣೇಶ್ ಶಿರ್ಲಾಲು, ಜೊತೆ ಕಾರ್ಯದರ್ಶಿಯಾಗಿ ಜಯಕಿರಣ ವರದಿಗಾರ ಅಶ್ರಫ್ ಆಲಿಕುಂಞಿ ಮುಂಡಾಜೆ ಅವಿರೋಧವಾಗಿ ಆಯ್ಕೆಯಾದರು.

 

 

 

 

                       ಪುಷ್ಪರಾಜ್ ಶೆಟ್ಟಿ                         ಕೋಶಾಧಿಕಾರಿ

 

 

             ಗಣೇಶ್ ಬಿ. ಶಿರ್ಲಾಲ್                  ಉಪಾಧ್ಯಕ್ಷರು

 

 

 

            ಅಶ್ರಫ್ ಆಲಿಕುಂಞಿ ಮುಂಡಾಜೆ                       ಜತೆ ಕಾರ್ಯದರ್ಶಿ

 

ಸಂಘದ ಸದಸ್ಯರಾಗಿ ದೇವಿಪ್ರಸಾದ್, ಮಂಜುನಾಥ ರೈ, ಬಿ.ಎಸ್. ಕುಲಾಲ್, ಬಿ. ಜಾರಪ್ಪ ಪೂಜಾರಿ, ಶ್ರೀನಿವಾಸ ತಂತ್ರಿ, ಆಚುಶ್ರೀ ಬಾಂಗೇರು, ದೀಪಕ್ ಆಠವಳೆ, ಭುವನೇಶ್ವರ ಜಿ. ಗೇರುಕಟ್ಟೆ, ಅರವಿಂದ ಹೆಬ್ಬಾರ್, ಮನೋಹರ್ ಬಳೆಂಜ, ಆರ್.ಎನ್. ಪೂವಣಿ, ಹೃಷಿಕೇಶ್, ಶಿಬಿ ಧರ್ಮಸ್ಥಳ, ಪ್ರಸಾದ್ ಶೆಟ್ಟಿ ಎಣಿಂಜೆ, ಪದ್ಮನಾಭ ವೇಣೂರು, ಸಂಜೀವ ಎನ್.ಸಿ. ಆಯ್ಕೆಯಾಗಿದ್ದಾರೆ.

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!