ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಾಂಗ್ರೆಸ್ ಪಕ್ಷದಿಂದ ಸಮಾಜ ಒಡೆಯುವ ಕಾರ್ಯ: ಕಮ್ಯೂನಿಸ್ಟ್‌ ಕುತಂತ್ರಕ್ಕೆ ಬಲಿಯಾಗಬಾರದು ಸಮಾಜ: ಕಾಂಗ್ರೆಸ್- ಕಮ್ಯೂನಿಸ್ಟ್‌ ವಿರುದ್ಧ ವಾಗ್ದಾಳಿ ನಡೆಸಿದ ಇಂಧನ ಸಚಿವ ಸುನಿಲ್ ಕುಮಾರ್

ಕಾಂಗ್ರೆಸ್ ಪಕ್ಷದಿಂದ ಸಮಾಜ ಒಡೆಯುವ ಕಾರ್ಯ: ಕಮ್ಯೂನಿಸ್ಟ್‌ ಕುತಂತ್ರಕ್ಕೆ ಬಲಿಯಾಗಬಾರದು ಸಮಾಜ: ಕಾಂಗ್ರೆಸ್- ಕಮ್ಯೂನಿಸ್ಟ್‌ ವಿರುದ್ಧ ವಾಗ್ದಾಳಿ ನಡೆಸಿದ ಇಂಧನ ಸಚಿವ ಸುನಿಲ್ ಕುಮಾರ್

 

 

 

 

 

 

ಬೆಳ್ತಂಗಡಿ: ವಿದ್ಯುತ್ ಬೆಲೆ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಇವತ್ತು ವಿನಾಃ ಕಾರಣ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಬೇರೆ ಬೇರೆ ಹಂತಗಳಲ್ಲಿ ಮಾಡುತಿದೆ. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಲು ಅವರಿಗೆ ಆಗುತ್ತಿಲ್ಲ .‌ ಮುಖ್ಯಮಂತ್ರಿ ಬೊಮ್ಮಯಿ ಅವರು ಅಭಿವೃದ್ಧಿ ವಿಚಾರಗಳಿಗೆ ವೇಗವನ್ನು ಕೊಡುವಂತಹ ಪ್ರಯತ್ನ ಮಾಡುತಿದ್ದಾರೆ ಎಂದು ಇಂಧನ ಸಚಿವ  ವಿ.ಸುನಿಲ್ ಕುಮಾರ್ ಹೇಳಿದರು. ಅವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು. ಲೋಕೋಪಯೋಗಿ ಇಲಾಖೆಯಲ್ಲಿ ರಾಜ್ಯ ಹೆದ್ದಾರಿಗಳಿಗೆ ಸುಮಾರು 3500 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದು, ನಗರಾಭಿವೃದ್ಧಿ ಯೋಜನೆಯ ಮುಖಾಂತರ ರಾಜ್ಯದ ಎಲ್ಲಾ ಪುರ ಸಭೆ, ಪಟ್ಟಣ ಪಂಚಾಯತ್ ಗಳಿಗೆ ಹೆಚ್ಚಿನ ಅನುದಾನಗಳನ್ನು ನೀಡುವ ಮೂಲಕ ಅಭಿವೃದ್ಧಿ ಚಟುವಟಿಕೆ ಗಳಿಗೆ ಹೊಸ ಆಯಾಮ ಕೊಡುವ ಪ್ರಯತ್ನ ಮಾಡುತಿದ್ದಾರೆ ಇದನ್ನೆಲ್ಲ ಸಹಿಸದ ಕಾಂಗ್ರೆಸ್ ಬೇರೆ ಬೇರೆ ವಿಚಾರಗಳನ್ನು ಹಿಡಿದುಕೊಂಡು ಸಮಾಜವನ್ನು ಹೊಡೆಯುವಂತಹ ಕೆಲಸ ಮಾಡುತ್ತಿದೆ. ಕೇರಳದಲ್ಲಿ ಕಮ್ಯೂನಿಸ್ಟ್‌ ಸರ್ಕಾರ ನಿಯಮವಾಳಿಗಳಲ್ಲಿ ಉದ್ದೇಶ ಪೂರ್ವಕವಾಗಿ ಮಾಡಿರುವ ತಪ್ಪುಗಳು ಅವರು ಶಂಕರಾಚಾರ್ಯರ ಜಟಾಯು, ನಾರಾಯಣ ಗುರುಗಳ ಸ್ಥಬ್ಧ ಚಿತ್ರಗಳನ್ನು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಕಳುಹಿಸಿಕೊಟ್ಟು ತಿರಸ್ಕಾರ ಮಾಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿ, ಕಮ್ಯೂನಿಸ್ಟ್‌ ಸರ್ಕಾರವೇ ಸ್ವತಃ ಸೃಷ್ಟಿಸಿಕೊಂಡು ನಾರಾಯಣ ಗುರುಗಳಿಗೆ ಅಪಮಾನವಾಗಿದೆ ಎನ್ನುವಂತಹ ವಿವಾದವನ್ನು ಹುಟ್ಟು ಹಾಕಿದ್ದಾರೆ ಎಂದರು. ನಾರಾಯಣ ಗುರುಗಳ ಬಗ್ಗೆ ಅಪಾರವಾದ ಗೌರವವನ್ನು ಇಡೀ ಸಮಾಜ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಮೊದಲ ಬಾರಿ ಹೋದ ಸಂದರ್ಭದಲ್ಲಿ ನಾರಾಯಣ ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಪರಮ ಪೂಜ್ಯ ಸ್ವಾಮೀಜಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ಬಿಜೆಪಿ ಸರ್ಕಾರ ಬಂದ ನಂತರ ಈ ರೀತಿ ಅಪಾರವಾದ ಗೌರವವನ್ನು ಬಿ.ಜೆ.ಪಿ. ಸರ್ಕಾರ ನೀಡಿದೆ. ಅದರೆ ಇವತ್ತು ಕೇರಳ ಸರ್ಕಾರ ಮಾಡಿದ ಗೊಂದಲವನ್ನು ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಎತ್ತಿಕೊಂಡಿದೆ. ಈ ಮೂಲಕ ಕಾಂಗ್ರೆಸಿಗರಿಗೆ ನನ್ನ ಪ್ರಶ್ನೆ ಏನೆಂದರೆ ಲೇಡಿ ಹಿಲ್ ಸರ್ಕಲನ್ನು ನಾರಾಯಣ ಗುರು ವೃತ್ತ ಮಾಡಬೇಕೆಂದು ಬಿಜೆಪಿ ಮಹಾನಗರ ಪಾಲಿಕೆ ನಿರ್ಣಯವನ್ನು ಕೈಗೊಂಡಾಗ ಅವತ್ತು ಇಲ್ಲಿ ಇರುವಂತಹ ಕಾಂಗ್ರೆಸ್ಸಿಗರು ವಿರೋಧ ಮಾಡಿದ್ದರು. ದಾಖಲೆಗಳಲ್ಲಿ ಅದನ್ನು ವ್ಯಕ್ತಪಡಿಸಿದರು. ಅವತ್ತು ಇದಕ್ಕೆ ವಿರೋಧ ಮಾಡಿದವರು, ಈಗ ಏಕಾಏಕಿ ನಾರಾಯಣ ಗುರುಗಳಿಗೆ ಪ್ರೀತಿಯನ್ನು ತೋರಿಸುತ್ತಿರುವುದು ಯಾವ ಸಮಾಜವನ್ನು ಒಡೆಯುವ ಪ್ರಯತ್ನ? ಅದ್ದರಿಂದ ಸಮಾಜ ಹೊಡೆಯುವಂತಹ ಕಮ್ಯೂನಿಸ್ಟ್‌ ಕುತಂತ್ರಕ್ಕೆ ಸಮಾಜ ಬಲಿಯಾಗಬಾರದು ಎಂಬ ವಿನಂತಿ ಮಾಡುತ್ತ ನಾರಾಯಣ ಗುರುಗಳಿಗೆ ಗೌರವವನ್ನು ನೀಡುವ ನಿಟ್ಟಿನಲ್ಲಿ ಬೇರೆ ಬೇರೆ ಸಂಘಟನೆಗಳು ಗಣರಾಜ್ಯೋತ್ಸವ ದಿನ ಕಾರ್ಯಕ್ರಮಗಳನ್ನು ಮಾಡುತ್ತಿರುವುದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ನಾರಾಯಣ ಗುರುಗಳಿಗೆ ಗೌರವಾಯುತವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಸ್ವಾಗತಿಸಿ ಬೆಂಬಲಿಸುತ್ತೇನೆ. ಅದರೆ ಅವರ ಹೆಸರಿನಡಿಯಲ್ಲಿ ಕಮ್ಯೂನಿಸ್ಟ್‌ ಮತ್ತು ಕಾಂಗ್ರೆಸ್‌ ಮಾಡುತ್ತಿರುವ ಕುತಂತ್ರಕ್ಕೆ ಸಮಾಜ ಬಲಿಯಾಗಬಾರದು ಎಂಬ ವಿನಂತಿಯನ್ನು ಈ ಮೂಲಕ ಮಾಡುತ್ತೇನೆ ಎಂದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!