Home › ಫೆ. 19ರಂದು ಶನಿವಾರ ಸಂಜೆ ಬೆಳ್ತಂಗಡಿಯಲ್ಲಿ 'ಯೋಧರಿಗೊಂದು ನಮನ', 'ಗಾನವೈಭವ': ವಾಗ್ಮಿ ಆದರ್ಶ ಗೋಖಲೆ ವಿಶೇಷ ಉಪನ್ಯಾಸ, ಖ್ಯಾತ ಸಂಗೀತ ನಿರ್ದೇಶಕಿ, ಹಿನ್ನೆಲೆ ಗಾಯಕಿ ಮಾನಸ ಹೊಳ್ಳ, ಮಜಾ ಟಾಕೀಸ್ ಖ್ಯಾತಿಯ ರೆಮೋ, ಸರಿಗಮಪ ಶ್ರೀ ಹರ್ಷ, ಎದೆ ತುಂಬಿ ಹಾಡುವೆನು ಸಂದೇಶ್ ನೀರುಮಾರ್ಗ, ಮಹನ್ಯ ಗುರು ಪಾಟೀಲ, ಅನೀಶ್ ಪೂಜಾರಿ ವೇಣೂರು, ಹಿತೇಶ್ ಕಾಪಿನಡ್ಕ, ಪ್ರವೀಣ್ ಜೈನ್ ಮೊದಲಾದವರಿಂದ ಮನರಂಜನಾ ಕಾರ್ಯಕ್ರಮ: 'ಪ್ರಜಾಪ್ರಕಾಶ ನ್ಯೂಸ್' ಯೂಟ್ಯೂಬ್ ಚಾನಲ್'ನಲ್ಲಿ ನೇರಪ್ರಸಾರ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ 'ನಮ್ಮೂರ ಜಾತ್ರೆ' ಮಹಾರಥೋತ್ಸವ ಅಂಗವಾಗಿ ಆಯೋಜನೆ
ಫೆ. 19ರಂದು ಶನಿವಾರ ಸಂಜೆ ಬೆಳ್ತಂಗಡಿಯಲ್ಲಿ 'ಯೋಧರಿಗೊಂದು ನಮನ', 'ಗಾನವೈಭವ': ವಾಗ್ಮಿ ಆದರ್ಶ ಗೋಖಲೆ ವಿಶೇಷ ಉಪನ್ಯಾಸ, ಖ್ಯಾತ ಸಂಗೀತ ನಿರ್ದೇಶಕಿ, ಹಿನ್ನೆಲೆ ಗಾಯಕಿ ಮಾನಸ ಹೊಳ್ಳ, ಮಜಾ ಟಾಕೀಸ್ ಖ್ಯಾತಿಯ ರೆಮೋ, ಸರಿಗಮಪ ಶ್ರೀ ಹರ್ಷ, ಎದೆ ತುಂಬಿ ಹಾಡುವೆನು ಸಂದೇಶ್ ನೀರುಮಾರ್ಗ, ಮಹನ್ಯ ಗುರು ಪಾಟೀಲ, ಅನೀಶ್ ಪೂಜಾರಿ ವೇಣೂರು, ಹಿತೇಶ್ ಕಾಪಿನಡ್ಕ, ಪ್ರವೀಣ್ ಜೈನ್ ಮೊದಲಾದವರಿಂದ ಮನರಂಜನಾ ಕಾರ್ಯಕ್ರಮ: 'ಪ್ರಜಾಪ್ರಕಾಶ ನ್ಯೂಸ್' ಯೂಟ್ಯೂಬ್ ಚಾನಲ್'ನಲ್ಲಿ ನೇರಪ್ರಸಾರ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ 'ನಮ್ಮೂರ ಜಾತ್ರೆ' ಮಹಾರಥೋತ್ಸವ ಅಂಗವಾಗಿ ಆಯೋಜನೆ
ONLINE PUDU / Wednesday, February 16, 2022
ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ನಮ್ಮೂರ ಜಾತ್ರೆ ಮಹಾರಥೋತ್ಸವ ಅಂಗವಾಗಿ ಫೆ. 19ರಂದು ಶನಿವಾರ ಸಂಜೆ 6.30ರಿಂದ ಬೆಳ್ತಂಗಡಿ, ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮುಂಭಾಗ ನವಶಕ್ತಿ ಫ್ರೆಂಡ್ಸ್ ಅರ್ಪಿಸಿ, ಕಾಶಿ ಪ್ಯಾಲೇಸ್ ಉಜಿರೆ ಪಾಯೋಜಕತ್ವದಲ್ಲಿ “ಯೋಧರಿಗೊಂದು ನಮನ" ಹಾಗೂ "ಗಾನವೈಭವ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನವಶಕ್ತಿ ಫ್ರೆಂಡ್ಸ್ ಸದಸ್ಯ ಜಗದೀಶ್ ಕನ್ನಾಜೆ ಹೇಳಿದರು.
ಅವರು ಬೆಳ್ತಂಗಡಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯೋಧರಿಗೊಂದು ನಮನ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಉಮೇಶ್ ಬಂಗೇರ ಕುದುಲ, ರಮೇಶ್ ಬಂದಾರು ಮತ್ತು ಸಮಾಜ ಸೇವಕ ನಾಣ್ಯಪ್ಪ ಗೌಡ ಮಚ್ಚಿನ ಅವರಿಗೆ ಸನ್ಮಾನ ನಡೆಯಲಿದೆ. ಈ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಉದ್ಯಮಿ ಮತ್ತು ಬರೋಡಾ ತುಳು ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ, ಲಕ್ಷ್ಮೀ ಗ್ರೂಪ್ ಮಾಲಕರು ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಬೆಳ್ತಂಗಡಿ ನಗರ ಪಂಚಾಯತ್‌ನ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ರಾಷ್ಟ್ರೀಯತೆ ಎನ್ನುವ ವಿಷಯದ ಬಗ್ಗೆ ಅಂಕಣಕಾರ ಮತ್ತು ಖ್ಯಾತ ವಾಗ್ಮಿ ಆದರ್ಶ ಗೋಖಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಖ್ಯಾತ ಸಂಗೀತ ನಿರ್ದೇಶಕಿ, ಹಿನ್ನೆಲೆ ಗಾಯಕಿ ಮಾನಸ ಹೊಳ್ಳ ಇವರ ಸಾರಥ್ಯದಲ್ಲಿ “ಗಾನ ವೈಭವ" ಕಾರ್ಯಕ್ರಮವು ನಡೆಯಲಿದೆ. ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ಖ್ಯಾತ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಇವರ ನಿರೂಪಣೆಯಲ್ಲಿ, ಮಜಾ ಟಾಕೀಸ್ ಖ್ಯಾತಿಯ ರಮೋ, ಝೀ ಕನ್ನಡದ ಸರಿಗಮಪ ಖ್ಯಾತಿಯ ಶ್ರೀ ಹರ್ಷ, ಎದೆ ತುಂಬಿ ಹಾಡುವನು ಖ್ಯಾತಿಯ ಸಂದೇಶ್ ನೀರುಮಾರ್ಗ ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯ ಗುರು ಪಾಟೀಲ ಅವರಿಂದ ಗಾಯನ ಕಾರ್ಯಕ್ರಮ ಮತ್ತು ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು, ಹಿತೇಶ್ ಕಾಪಿನಡ್ಕ, ಪ್ರವೀಣ್ ಜೈನ್ ಅವರಿಂದ ಹಾಸ್ಯದ ಹೊನಲು ಕಾರ್ಯಕ್ರಮವು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನವಶಕ್ತಿ ಫ್ರೆಂಡ್ಸ್ ಸದಸ್ಯರಾದ ಅರವಿಂದ್, ಪ್ರಕಾಶ್, ಗಣೇಶ್ ಲಾಯಿಲಾ, ಉಮೇಶ್ ಕುಲಾಲ್ ಉಪಸ್ಥಿತರಿದ್ದರು.