ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹಿಂದುತ್ವದ ಹೆಸರಿನಲ್ಲಿ ದಲಿತ ಸಮುದಾಯದ ವ್ಯಕ್ತಿಯ ಕೊಲೆ ನಡೆಸಿರುವ ಕೃತ್ಯ ಖಂಡನೀಯ: ವಾರದೊಳಗೆ ಆರೋಪಿ, ಸಹಕರಿಸಿದವರ ಬಂಧಿಸದಿದ್ದರೆ ಕ್ರಮ: ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಚಂದು ಹೇಳಿಕೆ

ಹಿಂದುತ್ವದ ಹೆಸರಿನಲ್ಲಿ ದಲಿತ ಸಮುದಾಯದ ವ್ಯಕ್ತಿಯ ಕೊಲೆ ನಡೆಸಿರುವ ಕೃತ್ಯ ಖಂಡನೀಯ: ವಾರದೊಳಗೆ ಆರೋಪಿ, ಸಹಕರಿಸಿದವರ ಬಂಧಿಸದಿದ್ದರೆ ಕ್ರಮ: ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಚಂದು ಹೇಳಿಕೆ

 

ಬೆಳ್ತಂಗಡಿ:  ಕನ್ಯಾಡಿಯಲ್ಲಿ ದಲಿತ ಯುವಕನನ್ನು ಹಿಂದೂ‌ ಸಂಘಟನೆಯೊಂದರ ಕಾರ್ಯಕರ್ತ ಕೊಲೆ ನಡೆಸಿರುವ ಕೃತ್ಯ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ಹೇಳಿದ್ದಾರೆ. ಧರ್ಮಸ್ಥಳ ಕನ್ಯಾಡಿಯಲ್ಲಿ‌ ಹಿಂದೂ‌ ಸಂಘಟನೆಯೊಂದರ ಕಾರ್ಯಕರ್ತ ಕೃಷ್ಣ ಡಿ ಅಲಿಯಾಸ್ ಕಿಟ್ಟ ಎಂಬಾತ ದಲಿತ ಯುವಕ ದಿನೇಶ್ ಎಂಬಾತನನ್ನು ವಿನಾಃ ಕಾರಣ ನಡು ಬೀದಿಯಲ್ಲಿ ಹೊಡೆದು , ಹಲ್ಲೆ ನಡೆಸಿರುವುದು ಅಮಾನವೀಯತೆಗೆ ಸಾಕ್ಷಿಯಾಗಿದೆ. ಹಿಂದುತ್ವದ ಹೆಸರಿನಲ್ಲಿ ದಲಿತ ಸಮುದಾಯದ ಮೇಲೆ ದಾಳಿ, ದೌರ್ಜನ್ಯ, ಹಲ್ಲೆ, ಕೊಲೆಗಳನ್ನು ನಡೆಸಲು ಬೆಳ್ತಂಗಡಿ ತಾಲೂಕಿನಲ್ಲಿ ಅವಕಾಶ ನೀಡಲ್ಲ ಎಂದು ಎಚ್ಚರಿಕೆ ನೀಡಿರುವ ಅವರು ಬೆಳ್ತಂಗಡಿ ತಾಲೂಕು ಉತ್ತರ ಪ್ರದೇಶ, ಗುಜರಾತ್ ಅಲ್ಲ ಎಂಬುದನ್ನು ತಿಳಿದರೆ ಒಳ್ಳೆಯದು. ಇಲ್ಲದಿದ್ದರೆ ನಮಗೂ ಅದೇ ಭಾಷೆಯಲ್ಲಿ ಉತ್ತರಿಸುತ್ತೇವೆ. ಒಂದು ವಾರದ ಒಳಗಾಗಿ ಆರೋಪಿಯನ್ನು ಹಾಗೂ ಸಹಕರಿಸಿದವರನ್ನು ಬಂಧಿಸದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!