ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೆಂಪು ಕಲ್ಲು ಬಿದ್ದು 3 ವರ್ಷದ ಮಗು ದಾರುಣ ಸಾವು ಕುಪ್ಪೆಟ್ಟಿ ಸಮೀಪ ನಡೆದ ಘಟನೆ

ಕೆಂಪು ಕಲ್ಲು ಬಿದ್ದು 3 ವರ್ಷದ ಮಗು ದಾರುಣ ಸಾವು ಕುಪ್ಪೆಟ್ಟಿ ಸಮೀಪ ನಡೆದ ಘಟನೆ

 

 

ಉಪ್ಪಿನಂಗಡಿ: ಮನೆ ಕೆಲಸಕ್ಕಾಗಿ ಅಂಗಳದಲ್ಲಿ ಜೋಡಿಸಿಟ್ಟಿದ್ದ ಕೆಂಪು ಕಲ್ಲು ಕುಸಿದು ಬಿದ್ದು ಮೂರು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ನಡೆದಿದೆ.

ಕುಪ್ಪೆಟಿ ನಿವಾಸಿ ಅಶ್ರಪ್ ಎಂಬವರ ಮೂರು ವರ್ಷ ಪ್ರಾಯದ ಮಹಮ್ಮದ್ ನೌಷೀರ್ ಮೃತಪಟ್ಟ ಮಗು. ಮಗು ಮನೆ ಹೊರಗಡೆ ಅಂಗಳದಲ್ಲಿ ಆಟ ಆಡುತ್ತಿದ್ದ ಸಂದರ್ಭ ಅಂಗಳದಲ್ಲಿ ಮನೆ ಕೆಲಸಕ್ಕಾಗಿ ಇರಿಸಿದ್ದ ಕಲ್ಲು ಕುಸಿದು ಈ ಘಟನೆ ಸಂಭವಿಸಿದೆ.

ಅಶ್ರಪ್ ಅವರ ಮನೆಯ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಕಲ್ಲು ತಂದು ಇಡಲಾಗಿತ್ತು. ಆಕಸ್ಮಿಕವಾಗಿ ಕಲ್ಲು ಜಾರಿ ಮಗುವಿನ ಮೇಲೆ ಬಿದ್ದಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!