ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬಸ್, ಬೈಕ್ ಡಿಕ್ಕಿ ಉಪ್ಪಿನಂಗಡಿ, ಹಿರೆಬಂಡಾಡಿಯ ಸಹೋದರರಿಬ್ಬರ ದಾರುಣ ಸಾವು: ಮರಣದ ಮನೆಯಿಂದ ಹಿಂತಿರುಗುತಿದ್ದ ವೇಳೆ ದುರ್ಘಟನೆ:

ಬಸ್, ಬೈಕ್ ಡಿಕ್ಕಿ ಉಪ್ಪಿನಂಗಡಿ, ಹಿರೆಬಂಡಾಡಿಯ ಸಹೋದರರಿಬ್ಬರ ದಾರುಣ ಸಾವು: ಮರಣದ ಮನೆಯಿಂದ ಹಿಂತಿರುಗುತಿದ್ದ ವೇಳೆ ದುರ್ಘಟನೆ:

 

 

 

 

 

 

ಬೆಳ್ತಂಗಡಿ: ಗರ್ಡಾಡಿ ಸಮೀಪದ ನಂದಿಬೆಟ್ಟ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಕೆ.ಎಸ್. ಆರ್. ಟಿ. ಸಿ. ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿದ್ದ  ಸಹೋದರರಿಬ್ಬರೂ ಸಾವನ್ನಪ್ಪಿದ ದಾರುಣ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಉಪ್ಪಿನಂಗಡಿ ಸಮೀಪದ ಹಿರೇ ಬಂಡಾಡಿಯವರು ಎಂದು ಗುರುತಿಸಲಾಗಿದೆ. ಧರ್ಮಸ್ಥಳದಿಂದ ಕುಂದಾಪುರ ಹೋಗುತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ವೇಣೂರಿನಿಂದ ಗುರುವಾಯನಕೆರೆ ಕಡೆ ಬರುತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದೆನ್ನಲಾಗಿದೆ. ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊರ್ವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಮೃತರನ್ನು ಉಪ್ಪಿನಂಗಡಿ ಸಮೀಪದ ಹಿರೇ ಬಂಡಾಡಿಯ ನಿವೃತ್ತ ಶಿಕ್ಷಕ ಮಹ್ರೂಮ್ ಅಬ್ದುಲ್ ರಝಾಕ್ ಅವರ ಪುತ್ರರಾದ ಹಮ್ಮಬ್ಬ ಸಿರಾಜ್, ಮತ್ತು ಕತುಬುದ್ಧಿನ್ ಸಾದಿಕ್ ಎಂದು ತಿಳಿದು ಬಂದಿದೆ. ಅವರು ಗುರುವಾರ ಅನಾರೋಗ್ಯದಿಂದ ಮೃತ ಪಟ್ಟ ಅಣ್ಣನ ಮಗುವಿನ ಮರಣ ಕಾರ್ಯ ಮುಗಿಸಿ ಹಿಂದಿರುಗಿ ಬರುತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!