ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅತ್ತೆ ಮಗನಿಂದ ಲೈಂಗಿಕ ‌ದೌರ್ಜನ್ಯ, ಗರ್ಭಿಣಿಯಾದ ಬಾಲಕಿ: ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ, ಕುವೆಟ್ಟು ಗ್ರಾಮದ ರಾಜೇಶ್ ಪೊಲೀಸ್‌ ವಶಕ್ಕೆ:

ಅತ್ತೆ ಮಗನಿಂದ ಲೈಂಗಿಕ ‌ದೌರ್ಜನ್ಯ, ಗರ್ಭಿಣಿಯಾದ ಬಾಲಕಿ: ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ, ಕುವೆಟ್ಟು ಗ್ರಾಮದ ರಾಜೇಶ್ ಪೊಲೀಸ್‌ ವಶಕ್ಕೆ:

 

 

 

ಬೆಳ್ತಂಗಡಿ: ಅತ್ತೆ ಮಗನೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಆಕೆ ಗರ್ಭಿಣಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುವೆಟ್ಟು ಗ್ರಾಮದ ನಿವಾಸಿ ರಾಜೇಶ್ ಎಂಬಾತನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಸಂತ್ರಸ್ತೆ 2021ರ ಜುಲೈನಲ್ಲಿ ತನ್ನ ತಂದೆಯ ಅಕ್ಕನ ಮನೆಯಾದ ಕುವೆಟ್ಟು ಗ್ರಾಮದ ಮನೆಗೆ ಹೋಗಿದ್ದ ವೇಳೆ, ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅತ್ತೆಯ ಮಗ ರಾಜೇಶ್‌ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಒಂದು ತಿಂಗಳ ಬಳಿಕ ಮತ್ತೆ ಆರೋಪಿಯ ಮನೆಗೆ ಹೋಗಿದ್ದ ವೇಳೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ‌ ಎಂದು ದೂರಲಾಗಿದೆ. ಕೆಲವು ವಾರಗಳ‌ ಹಿಂದೆ ಬಾಲಕಿ‌ ಅನಾರೋಗ್ಯದಿಂದ ಮನೆಯಲ್ಲಿ ಮಲಗಿದ್ದು, ಹೆತ್ತವರು ವಿಚಾರಿಸಿದಾಗ ನಿಜಾಂಶ‌ ಬೆಳಕಿಗೆ ಬಂದಿದೆ. ಬಳಿಕ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ. ಪೋಕ್ಸೋ ಕಾಯ್ದೆಯಡಿ‌ ಪ್ರಕರಣ ದಾಖಲಿಸಿರುವ ಬೆಳ್ತಂಗಡಿ ಪೊಲೀಸರು ಆರೋಪಿ ರಾಜೇಶನನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!