ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರ ಸಮಗ್ರ ಗ್ರಾಮೀಣಾಭಿವೃದ್ಧಿ ಎಂಬ ಪುಸ್ತಕವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಈಗಿನ ವ್ಯವಸ್ಥೆಗೆ ಅದು ಭಗವದ್ಗಿತೆ ಇದ್ದಂತೆ ಈ ನಿಟ್ಟಿನಲ್ಲಿ ಸಮಗ್ರವಾದ ವಿವರಗಳ ಕೈಗನ್ನಡಿಯನ್ನು ಪುಸ್ತಕ ರೂಪದಲ್ಲಿ ಹೊರತಂದ್ದ ಅವರಿಗೆ ಅಭಿನಂದನೆಗಳು ಅವರು ಬೆಳ್ತಂಗಡಿ ಮೇಲೆ ಅಪಾರವಾದ ಅಭಿಮಾನ ಹೊಂದಿದ್ದು ಈಗಾಗಲೇ ಮೂರು ಗ್ರಂಥಾಲಯ ರಚನೆಗೆ ಸಹಕಾರ ನೀಡಿದ್ದಾರೆ. ಗ್ರಾಮದ ಸ್ಚಚ್ಚತೆಯ ನಿಟ್ಟಿನಲ್ಲಿ ದಾನಿಗಳ ಸಹಕಾರದ ಮೂಲಕ ಹೊಸ ಸ್ಚಚ್ಚತಾ ವಾಹನವನ್ನು ಖರೀದಿಸಿ ಲಾಯಿಲ ಪಂಚಾಯತ್ ಲೋಕಾರ್ಪಣೆ ಮಾಡಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ.
ಬಹುವರುಷಗಳ ಜನರ ಬೇಡಿಕೆಯಾಗಿದ್ದ ಪುಂಜಾಲಕಟ್ಟೆ ಗುರುವಾಯನಕೆರೆ ರಸ್ತೆ ಅಗಲೀಕರಣ ಮಾಡಬೇಕು ಈ ರಸ್ತೆ ಯಾವಾಗ ಅಗಲೀಕರಣಗೊಳ್ಳುತ್ತದೆ ಎಂಬ ಕುತೂಹಲ ಹಲವರಲ್ಲಿ ಇತ್ತು ಈಗ ರಸ್ತೆ ಅಭಿವೃದ್ಧಿಗಾಗಿ 718 ಕೋಟಿ ರೂಪಾಯಿ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಮುತುವರ್ಜಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ನಿತೀನ್ ಗಡ್ಕರಿಯವರ ಮೂಲಕ ಮಂಜೂರಾಗಿದ್ದು ಇದರಿಂದ ಗುರುವಾಯನಕೆರೆ ಬೆಳ್ತಂಗಡಿ ಉಜಿರೆ ಚತುಷ್ಪಥ ರಸ್ತೆ ನಿರ್ಮಾಣಗೊಂಡು ಬೆಳ್ತಂಗಡಿಯಲ್ಲಿ ಹೊಸ ಶಕೆ ಪ್ರಾರಂಭವಾಗಿದೆ ಈ ಮೂಲಕ ನವ ಬೆಳ್ತಂಗಡಿ ನಿರ್ಮಾಣದ ಕಲ್ಪನೆ ಸಾಕಾರಗೊಂಡು ಜನರ ಬಹುದಿನಗಳ ಕನಸು ನನಸಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ ರಾಜ್ಯಕ್ಕೆ ಮಾದರಿಯಾಗುವಂತಹ ರೀತಿಯಲ್ಲಿ ಗ್ರಂಥಾಲಯವೊಂದು ಬೆಳ್ತಂಗಡಿಯಲ್ಲಿ ನಿರ್ಮಾಣವಾಗುತ್ತಿದ್ದು ಬೆಳ್ತಂಗಡಿ ಶಾಸಕರು ಶಿಕ್ಷಣದ ಹಾಗೂ ಜ್ಞಾನದ ಕ್ಷೇತ್ರಕ್ಕೆ ಬಹಳ ಒತ್ತನ್ನು ನೀಡುತ್ತಿರುವುದರಿಂದ ಮೂರು ಗ್ರಂಥಾಲಯವನ್ನು 5 ಲಕ್ಷ ರೂ ಅನುದಾನದಲ್ಲಿ ಬೆಳ್ತಂಗಡಿಯ ಮೂರು ಗ್ರಾಮ ಪಂಚಾಯತ್ ನಲ್ಲಿ ನಿರ್ಮಿಸಲಾಗುತಿದ್ದು ಲಾಯಿಲದಲ್ಲಿ ಶಿಲಾನ್ಯಾಸ ಶಾಸಕರ ಮೂಲಕ ಮಾಡಲಾಗಿದೆ.ಯುವ ಮನಸ್ಸು ಸದಾ ಅಭಿವೃದ್ಧಿ ಪರ ಚಿಂತನೆಯಲ್ಲಿರುವ ಶಾಸಕರ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ.
ಅಭಿವೃದ್ಧಿ ಹಾಗೂ ಉತ್ತಮ ಕಾರ್ಯಚಟುವಟಿಕೆಗಳ ಮೂಲಕ ಲಾಯಿಲ ಗ್ರಾಮ ಪಂಚಾಯಿತಿ ಮೊದಲಿನಿಂದಲೂ ಒಳ್ಳೆಯ ಹೆಸರನ್ನು ಗಳಿಸಿಕೊಂಡು ಬಂದಿದೆ.ಪಂಚಾಯತ್ ಸಮರ್ಪಕವಾಗಿ ಅಭಿವೃದ್ಧಿ ಹೊಂದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಉತ್ತಮ ಸಾಮರಸ್ಯ ಇರಬೇಕು.
ಸ್ನೇಹ ಸಮಗ್ರ ಸಂಜೀವಿನಿ ಒಕ್ಕೂಟದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಧಾನ ಮಂತ್ರಿ ಕಿರು ಆಹಾರ ಯೋಜನೆ ಲಾಯಿಲದ ಸಮಗ್ರ ಸಂಜೀವಿನಿ ಸದಸ್ಯರು ಪ್ರಾರಂಭಿಸುತ್ತಿದ್ದಾರೆ .ಅದ್ದರಿಂದ ಇನ್ನಷ್ಟೂ ಮಹಿಳಾ ಒಕ್ಕೂಟಗಳಿಗೆ ಮಾಹಿತಿಯನ್ನು ನೀಡಬೇಕು ಎಂದರು.