ಇವರ ಲಯನ್ಸ್ ಸೇವಾ ಅವಧಿಯು 2022 ಜೂನ್ ತಿಂಗಳಿನಿಂದ 2023ರ ಜೂನ್ ತನಕ ಇರುತ್ತದೆ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆ ಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 ಡಿ ಯ ಸುಮಾರು 1500 ಸದಸ್ಯರು ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ಲಯನ್ಸ್ ಕ್ಲಬ್ಬಿನಿಂದ ಅಧ್ಯಕ್ಷರಾದ ಹೇಮಂತ್ ರಾವ್ ಏರ್ಡೂರು, ಕಾರ್ಯದರ್ಶಿ ಅನಂತಕೃಷ್ಣ, ಕೋಶಾಧಿಕಾರಿ ದತ್ತಾತ್ರಯ, ಆರ್. ಸಿ. ಧರಣೇಂದ್ರ ಜೈನ್, ಪೂರ್ವಾಧ್ಯಕ್ಷರಾದ ವಿಶ್ವನಾಥ್ ನಾಯಕ್, ಪ್ರಕಾಶ್ ಶೆಟ್ಟಿ ನೊಚ್ಚ, ರಾಮಕೃಷ್ಣ ಗೌಡ, ನಿಯೋಜಿತ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಬೊಲ್ಮ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.