ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಾರಂಟ್ ಹಿಡಿದು ಮನೆಗೆ ಹೋದ ಪೊಲೀಸರ ಮೇಲೆ ಹಲ್ಲೆ: ಪಿಲ್ಯ ಸಮೀಪ ಪೊಲೀಸರ ಕರ್ತವ್ಯಕ್ಕೆ ಅಡ್ಡಿ

ವಾರಂಟ್ ಹಿಡಿದು ಮನೆಗೆ ಹೋದ ಪೊಲೀಸರ ಮೇಲೆ ಹಲ್ಲೆ: ಪಿಲ್ಯ ಸಮೀಪ ಪೊಲೀಸರ ಕರ್ತವ್ಯಕ್ಕೆ ಅಡ್ಡಿ

 

 

 

 

ವೇಣೂರು':ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಾರಂಟ್ ವಿಚಾರಕ್ಕೆ  ಮನೆಗೆ ಹೋದ ಪೊಲೀಸ್ ಸಿಬ್ಬಂದಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳದಂಗಡಿಯ ಪಿಲ್ಯ ಸಮೀಪ ನಡದಿದೆ. ಪಿಲ್ಯ ಸಮೀಪದ ಗೋಳಿಕಟ್ಟೆ ಎಂಬಲ್ಲಿಯ ಅಬ್ದುಲ್ ಲತೀಫ್ ಎಂಬಾತನಿಗೆ ಕುಂದಾಪುರ ನ್ಯಾಯಾಲಯ ವಾರಂಟ್ ನೀಡಿದ್ದು  ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯ  ಸಿಬ್ಬಂದಿಗಳಾದ ಲೋಹಿತ್ ಹಾಗೂ ನಾರಾಯಣ ಗೌಡ ಅವರು ಅಬ್ದುಲ್ ಲತೀಫ್   ಮನೆಗೆ ಹುಡುಕಿಕೊಂಡು ಹೋಗಿ   ವಾರಂಟ್ ಪ್ರತಿ ತೋರಿಸಿ  ನಮ್ಮೊಂದಿಗೆ  ಬರುವಂತೆ ಸೂಚಿಸಿದಾಗ ವಾರಂಟ್ ಪ್ರತಿಯನ್ನು   ಪೊಲೀಸರ ಕೈಯಿಂದ ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದಲ್ಲದೇ ಇತರರನ್ನು ಕರೆದು ಹಲ್ಲೆ ಮಾಡಿ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವೇಣೂರು ಠಾಣೆಗೆ ನಾರಾಯಣ ಗೌಡ  ದೂರು ನೀಡಿದ್ದು  ಅಬ್ದುಲ್ ಲತೀಫ್ ಸೇರಿದಂತೆ ಹಲವರ ಮೇಲೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!