ತಕ್ಷಣ ಸ್ಪಂದಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದ್ದು ದನವನ್ನು ಬಾವಿಯಿಂದ ಎತ್ತಿ ರಕ್ಷಿಸಿದ್ದಾರೆ . ಬಾವಿಯಲ್ಲಿ ನೀರು ಇದ್ದುದರಿಂದ ದನಕ್ಕೆ ಯಾವುದೇ ರೀತಿಯ ಅಪಾಯವಾಗಿಲ್ಲ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಾದ ಠಾಣಾಧಿಕಾರಿ ಕೆ. ವಿಶ್ವನಾಥ್ ಪೂಜಾರಿ, ಚಾಲಕ ಲಿಂಗರಾಜ್ ಲಮಾಣಿ, ಮಂಗಳದಾಸ್ ನಾಯ್ಕ್ , ಮಹಮ್ಮದ್ ಜಂಬಗಿ, ವಿನೋದ್ ರಾಜ್ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಸೇರಿದಂತೆ ಸ್ಥಳೀಯರು ಸಹಕರಿಸಿದರು.