ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಯುವ ಪ್ರತಿಭೆ ಬರಹಗಾರ ಚಂದ್ರಹಾಸ ಬಳಂಜ ಸಾಧನೆಯ ಹಾದಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ : ಅಂತ್ಯ-ಆರಂಭಕ್ಕೊಂದು ಮುನ್ನುಡಿ ಸಾಹಿತ್ಯ ಲೋಕದ ವಿಭಿನ್ನ ಪುಸ್ತಕ

ಯುವ ಪ್ರತಿಭೆ ಬರಹಗಾರ ಚಂದ್ರಹಾಸ ಬಳಂಜ ಸಾಧನೆಯ ಹಾದಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ : ಅಂತ್ಯ-ಆರಂಭಕ್ಕೊಂದು ಮುನ್ನುಡಿ ಸಾಹಿತ್ಯ ಲೋಕದ ವಿಭಿನ್ನ ಪುಸ್ತಕ

 

 

 

 

 

ಬೆಳ್ತಂಗಡಿ:ಯುವ ಸಾಹಿತಿ, ಬಹುಮುಖ ಪ್ರತಿಭೆ ಚಂದ್ರಹಾಸ ಬಳಂಜರವರ ಸಾಧನೆಯ ಹಾದಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಇನ್ನೊಂದು ಗರಿಯನ್ನ ನೀಡಿದೆ.‌

ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಇವರು ಒಬ್ಬ ಯುವ ಸಾಹಿತಿ, ವಾಗ್ಮಿ, ನಿರೂಪಕ, ಹಾಡುಗಾರ, ನೃತ್ಯಪಟು, ನಟ ಮತ್ತು ತರಬೇತುದಾರ. ಸಾಂಸ್ಕ್ರತಿಕ‌ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ಹಲವಾರು ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಹಲವಾರು ಲೇಖನಗಳು ಪ್ರಕಟಗೊಂಡಿದೆ.

ವಿಶೇಷವಾಗಿ ಸಾಹಿತ್ಯ ಲೋಕದಲ್ಲಿ ಕನ್ನಡ ವರ್ಣಮಾಲೆಯನ್ನಿಟ್ಟುಕ್ಕೊಂಡು ಪ್ರತಿಯೊಂದು ವರ್ಣಮಾಲೆ ಅಕ್ಷರಕ್ಕು ಒಂದೊಂದು ಕವನ ರಚಿಸಿ, ಕವನದ ಎಲ್ಲ ಸಾಲುಗಳ ಪ್ರಥಮ ಅಕ್ಷರ ಒಂದೇ ಬರುವಂತೆ ಜೋಡಿಸಿ ಬಹಳ ವಿಭಿನ್ನವಾಗಿ ಬರೆದ ಅಂತ್ಯ-ಆರಂಭಕ್ಕೊಂದು ಮುನ್ನುಡಿ ಪುಸ್ತಕ ಸಾಹಿತ್ಯ ಲೋಕದ ಅತ್ಯಂತ ವಿಭಿನ್ನ ಪುಸ್ತಕವೆಂದು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಇವರನ್ನು ಗುರುತಿಸಿದೆ.

ಇದೇ ಮೊದಲ ಬಾರಿಗೆ ಇಂತಹ ಪುಸ್ತಕ ಪ್ರಕಟವಾಗಿದ್ದು ಈ ಪುಸ್ತಕವನ್ನ ಯುವವಾಹಿನಿ‌ ರಿ ಬೆಳ್ತಂಗಡಿಯು ಪ್ರಕಟಿಸಿದೆ.

ಇವರ ಬಹುಮುಖ ಸಾಧನೆಗೆ ಈಗಾಗಲೇ ದ.ಕ ಜಿಲ್ಲಾ ಯುವ ಸಾಧಕ ಪ್ರಶಸ್ತಿ, ಪ್ರಭಾಕರ ನೀರುಮಾರ್ಗ ಯುವ ಸಾಹಿತಿ ಪ್ರಶಸ್ತಿ , ಎ.ಪಿ‌.ಜೆ ಅಬ್ದುಲ್ ಕಲಾಂ ಪುರಸ್ಕಾರ, ಜೆಸಿಐ ಸಾಧನಾ ಶ್ರೀ ಪ್ರಶಸ್ತಿ, ಸಾಂಸ್ಕೃತಿಕ ಚೇತನ ಪುರಸ್ಕಾರ ಮತ್ತು ರಾಜ್ಯ, ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳು ಲಭಿಸಿವೆ.

ಕಲರ್ಸ್ ಕನ್ನಡದ ರೀಯಾಲಿಟಿ ಶೋಗಳಲ್ಲಿ ಕ್ರೀಯೆಟಿವ್ ಆಗಿ ಕರ್ತವ್ಯ ನಿರ್ವಹಿಸಿ ರುವ ಇವರು ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಯುವವಾಹಿನಿ ಬೆಳ್ತಂಗಡಿಯ ನಿರ್ದೇಶಕರಾಗಿ, ಬಳಂಜ ಬಿಲ್ಲವ ಸಂಘದ ಸಕ್ರೀಯ ಸದಸ್ಯರಾಗಿದ್ದಾರೆ.

ಇವರು ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ಮನೆಯ ಪ್ರಗತಿಪರ ಕೃಷಿಕರಾದ ಶ್ರೀಧರ ಪೂಜಾರಿ ಮತ್ತು ಸುಶೀಲ ದಂಪತಿ ಪುತ್ರ, ಹಾಗೂ ಪತ್ರಕರ್ತ ಸಂತೋಷ್ ಪಿ ಕೋಟ್ಯಾನ್ ಬಳಂಜ ಅವರ ಸಹೋದರ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!