ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಜಿರೆ ಗ್ರಾಮ ಪಂಚಾಯಿತಿಗೆ ಅರುಣಾಚಲ ಪ್ರದೇಶದಿಂದ ಜನಪ್ರತಿನಿಧಿಗಳು ಭೇಟಿ ಉಜಿರೆ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಲಿರುವ ಜನಪ್ರತಿನಿಧಿಗಳ ತಂಡ

ಉಜಿರೆ ಗ್ರಾಮ ಪಂಚಾಯಿತಿಗೆ ಅರುಣಾಚಲ ಪ್ರದೇಶದಿಂದ ಜನಪ್ರತಿನಿಧಿಗಳು ಭೇಟಿ ಉಜಿರೆ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಲಿರುವ ಜನಪ್ರತಿನಿಧಿಗಳ ತಂಡ

 

 

 

ಬೆಳ್ತಂಗಡಿ: ಅರುಣಾಚಲ ಪ್ರದೇಶದ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್  ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳ  ಸುಮಾರು 30 ಜನರ ತಂಡ ಜೂನ್ 23 ರಂದು  ಉಜಿರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಲಿದೆ.ಉಜಿರೆಯಲ್ಲಿರುವ ಕಸ ವಿಲೇವಾರಿ ಘಟಕ ಹಾಗೂ ಕಸವನ್ನು ಯಂತ್ರಗಳ ಮೂಲಕ ಮರು ಬಳಕೆ ಮಾಡಿ ಅದರಿಂದ ವಿವಿಧ ರೀತಿಯ ಅದಾಯ ಪಡೆಯುವಂತಹ ವಸ್ತುಗಳ ತಯಾರಿ ಹಾಗೂ ಅಚ್ಚುಕಟ್ಟಾದ ಕಸ ವಿಲೇವಾರಿ ಘಟಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೆಡೆ ಪ್ರವಾಸ ಕೈಗೊಂಡಿರುವ ಈ  ತಂಡ ಉಜಿರೆ ಗ್ರಾಮ ಪಂಚಾಯಿತಿಗೂ ಭೇಟಿ ನೀಡಲಿದೆ. ಅಧ್ಯಯನ ಪ್ರವಾಸದಲ್ಲಿ ಬರುವ ತಂಡ ಕರ್ನಾಟಕದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ , ಸಂಸ್ಥೆಗಳ ಯೋಜನೆ ರೂಪಣೆ ಮತ್ತು ಮೇಲ್ವಿಚಾರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಟಾನ, ವಿನೂತನ ಚಟುವಟಿಕೆಗಳು,ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಸೂಕ್ತವಾದವುಗಳನ್ನು ಅನುಕರಣೆ ಮಾಡುವ ಉದ್ಧೇಶದಿಂದ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಉಜಿರೆಗೆ  ಆಗಮಿಸುವ ತಂಡ ಜಿ.ಪಿ.ಡಿ.ಪಿ,ಸ್ಥಾಯಿ ಸಮಿತಿ,ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಚರ್ಚೆ ನಡೆಸಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!