ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › 10 ತಿಂಗಳ ಮಗುವಿಗೆ ರೈಲ್ವೇ ಇಲಾಖೆಯಲ್ಲಿ ನೌಕರಿ..!: ರೈಲ್ವೇ ಇಲಾಖೆ ಇತಿಹಾಸದಲ್ಲೇ ಅತ್ಯಂತ ಕುತೂಹಲಕಾರಿ ವಿದ್ಯಮಾನ:

10 ತಿಂಗಳ ಮಗುವಿಗೆ ರೈಲ್ವೇ ಇಲಾಖೆಯಲ್ಲಿ ನೌಕರಿ..!: ರೈಲ್ವೇ ಇಲಾಖೆ ಇತಿಹಾಸದಲ್ಲೇ ಅತ್ಯಂತ ಕುತೂಹಲಕಾರಿ ವಿದ್ಯಮಾನ:

 

 

 

ದೆಹಲಿ: 10 ತಿಂಗಳ ಮಗುವಿಗೆ ನೌಕರಿ ನೀಡುವ ಮೂಲಕ ರೈಲ್ವೇ ಇಲಾಖೆ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಛತ್ತೀಸ್ ಗಡದ  ಆಗ್ನೇಯ ಕೇಂದ್ರ ರೈಲ್ವೆಯ ರಾಯಪುರ ವಿಭಾಗವು ಕೇವಲ 10 ತಿಂಗಳ ಹೆಣ್ಣು ಮಗು ರಾಧಿಕಾಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಿದೆ. ರೈಲ್ವೇ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ಕುತೂಹಲಕಾರಿ ವಿದ್ಯಮಾನ. ಈ ಹೆಣ್ಣು ಮಗು ತನಗೆ 18 ವರ್ಷ ತುಂಬಿದ ನಂತರ ಕೆಲಸಕ್ಕೆ ಹಾಜರಾಗುತ್ತಾಳೆ. ಮಗುವಿಗೆ ನೌಕರಿ ನೀಡಿದ್ದೇಕೆ?:

ರಾಧಿಕಾಳ ತಂದೆ ರಾಜೇಂದ್ರ ಕುಮಾರ್ ಯಾದವ್ ಅವರು ಭಿಲಾಯ್‌ನ ಪಿಪಿ ಯಾರ್ಡ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಮಂದಿರ್ ಹಸೌದ್​ನ ಚಾರೋಡದ ರೈಲ್ವೇ ಮನೆಯಲ್ಲಿ ಕುಟುಂಬ ವಾಸವಾಗಿತ್ತು. ಜೂ 01 ರಂದು ರಾಜೇಂದ್ರ ಕುಮಾರ್ ಹಾಗೂ ಅವರ ಪತ್ನಿ ಮಂಜು ಯಾದವ್ ತಮ್ಮ ಮಗು ರಾಧಿಕಾನ ಜೊತೆ ಮಂದಿರ ಹಸೌದ್‌ನಿಂದ ಭಿಲಾಯ್‌ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ಸಂದರ್ಭದಲ್ಲಿ ಮಗು ರಾಧಿಕಾ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾಳೆ. ತಂದೆ-ತಾಯಿಯ ಸಾವಿನ ನಂತರ ರಾಧಿಕಾಳನ್ನು ಅಜ್ಜಿಯೇ ಪಾಲನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಗುವಿನ ಹೆಬ್ಬೆಟ್ಟಿನ ಗುರುತು:

ಮಗುವಿಗೆ 18 ವರ್ಷ ತುಂಬಿದ ಬಳಿಕ ಅನುಕಂಪದ ಆಧಾರದ ಮೇಲೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು. ಇದಕ್ಕಾಗಿ ಮಗುವಿನ ದಾಖಲಾತಿ ಪ್ರಕ್ರಿಯೆ ರೈಲ್ವೇ ಇಲಾಖೆಯಿಂದ ನಡೆದಿದೆ. ಈ ಸಂದರ್ಭದಲ್ಲಿ ಹಿರಿಯ ವಿಭಾಗೀಯ ಸಿಬ್ಬಂದಿ ಉದಯ್ ಕುಮಾರ್ ಭಾರ್ತಿ ಮಗುವಿನ ಹೆಬ್ಬೆರಳ ಗುರುತು ಪಡೆಯುತ್ತಿರುವ ಕ್ಷಣ ಮನಮುಟ್ಟುವಂತಿತ್ತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!