ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪುದುವೆಟ್ಟು ಕಾಣೆಯಾಗಿದ್ದ ವ್ಯಕ್ತಿಯ ಶವ ನದಿಯಲ್ಲಿ ಪತ್ತೆ

ಪುದುವೆಟ್ಟು ಕಾಣೆಯಾಗಿದ್ದ ವ್ಯಕ್ತಿಯ ಶವ ನದಿಯಲ್ಲಿ ಪತ್ತೆ

 

 

 

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ(65 ) ಎಂಬವರು ಜೂ.30 ರಂದು ತೋಟಕ್ಕೆಂದು ಹೋದವರು ಮನೆಗೆ ವಾಪಾಸು ಹಿಂದಿರುಗದೆ ಕಾಣೆಯಾಗಿದ್ದರು ಇಂದು  ಅವರ ಮೃತ ದೇಹ ಮನೆ ಸಮೀಪದ   ನದಿಯಲ್ಲಿ ಪತ್ತೆಯಾಗಿದೆ.

ಜೂನ್ 30 ರಂದು  ತೋಟಕ್ಕೆ  ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು ಹೊತ್ತಾದರೂ  ವಾಪಾಸು ಹಿಂದಿರುಗದೇ ಇದ್ದಾಗ ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದ್ದರು

ಭಾರೀ ಮಳೆಯಿಂದಾಗಿ ತೋಟದ ಕಡೆ ಹೋಗುವಾಗ ತೊಟದ ಪಕ್ಕದಲ್ಲಿರುವ ನದಿಗೆ ಕಾಲು ಜಾರಿ ಬಿದ್ದು ನೀರಲ್ಲಿ ಕೊಚ್ಚಿಹೋಗಿರಬಹುದು ಎಂದು ಶಂಕಿಸಲಾಗಿತ್ತು. ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಮನೆಯವರು ದೂರು ನೀಡಿದ್ದರು.

ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ , ಅಗ್ನಿಶಾಮಕದಳ ಹಾಗೂ , ಸ್ಥಳೀಯರು ಧಾವಿಸಿ ಹುಡುಕಾಟ ನಡೆಸಿದರೂ  ಯಾವುದೇ ಸುಳಿವು ಲಭ್ಯವಾಗಿರಲ್ಲಿಲ್ಲ  ಅದರೆ  ಇಂದು ಜು 04  ಬೆಳಗ್ಗೆ ಮಡ್ಯ ಎಂಬಲ್ಲಿ ನದಿಯಲ್ಲಿ ಮೃತ ದೇಹ ತೇಲುತ್ತಿರುವುದನ್ನು ಗಮನಿಸಿ   ಪೊಲೀಸರಿಗೆ ಮಾಹಿತಿ ನೀಡಿದ್ದು ನಂತರ ಪೊಲೀಸರು ಪರಿಶೀಲನೆ ನಡೆಸಿ ಬೆಳ್ತಂಗಡಿ ಶವಗಾರಕ್ಕೆ ಸಾಗಿಸಿದ್ದಾರೆ‌ ,ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!