ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪುಂಜಾಲಕಟ್ಟೆ ಚಾರ್ಮಾಡಿ ಚತುಷ್ಪಥ ರಸ್ತೆ ಸರ್ವೇ ಕಾರ್ಯ ಪ್ರಾರಂಭ: ನವೆಂಬರ್ ತಿಂಗಳಲ್ಲಿ ಕಾಮಗಾರಿಗೆ ಚಾಲನೆ :

ಪುಂಜಾಲಕಟ್ಟೆ ಚಾರ್ಮಾಡಿ ಚತುಷ್ಪಥ ರಸ್ತೆ ಸರ್ವೇ ಕಾರ್ಯ ಪ್ರಾರಂಭ: ನವೆಂಬರ್ ತಿಂಗಳಲ್ಲಿ ಕಾಮಗಾರಿಗೆ ಚಾಲನೆ :

 

 

 

ಬೆಳ್ತಂಗಡಿ:ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆ-ಚಾರ್ಮಾಡಿ ತನಕ ನಡೆಯಲಿದ್ದು,718 ಕೋಟಿ ರೂ. ಅನುದಾನ ಮಂಜೂರು ಗೊಂಡಿದೆ.ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಕಳೆದ ಬಾರಿ ಮಾಡಿದ ಸಮೀಕ್ಷೆಗಳು ನಡೆದಿದ್ದು ಇದು ಅಪೂರ್ಣವಾಗಿದ್ದು ಸರಕಾರದ ಆದೇಶದಂತೆ ಹೊಸ ಸಮೀಕ್ಷೆ ಪ್ರಾರಂಭವಾಗಿದೆ. ರಸ್ತೆಯನ್ನು ಹೆಚ್ಚು ನೇರ ಗೊಳಿಸುವ ಉದ್ದೇಶದಿಂದ ಹೊಸ ಸಮೀಕ್ಷೆ ಆದೇಶಿಸಲಾಗಿದ್ದು ಈಗಾಗಲೇ ಸರ್ವೇ ಕಾರ್ಯ ಪ್ರಾರಂಭವಾಗಿದೆ.ಈ ಹಿಂದೆ ಈ ಪ್ರದೇಶದಲ್ಲಿ 35 ಕಿ.ಮೀ.ರಸ್ತೆ ಗುರುತಿಸಲಾಗಿದ್ದು ಅದಷ್ಟೂ ತಿರುವುಗಳು ತೆಗದು ನೇರಗೊಳಿಸುವ ಕಾರಣ 33.1ಕಿ.ಮೀ.ಗೆ ಕಡಿಮೆಗೊಳ್ಳಲಿದೆ.

 

 

 

ಜುಲೈ 11ರಂದು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ 10 ಕಂಪನಿಗಳು ಭಾಗವಹಿಸಿವೆ. ಶೀಘ್ರವೇ ಟೆಂಡರ್ ಪೂರ್ಣಗೊಳ್ಳಲಿದ್ದು ನವೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂಬ ಮಾಹಿತಿ ಈಗಾಗಲೇ ಲಭಿಸಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!