ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹಿಂದೂ ರಾಷ್ಟ್ರದ ಉಳಿವಿಗೆ ಇನ್ನೊಂದು ಪಕ್ಷ ಉದಯ : ಪ್ರಮೋದ್​ ಮುತಾಲಿಕ್​ ಬಿಜೆಪಿಗರು ಹಿಂದೂ ವಿರೋಧಿಗಳು: ಆಕ್ರೋಶ ಹೊರಹಾಕಿದ ಹಿಂದೂ ನಾಯಕ

ಹಿಂದೂ ರಾಷ್ಟ್ರದ ಉಳಿವಿಗೆ ಇನ್ನೊಂದು ಪಕ್ಷ ಉದಯ : ಪ್ರಮೋದ್​ ಮುತಾಲಿಕ್​ ಬಿಜೆಪಿಗರು ಹಿಂದೂ ವಿರೋಧಿಗಳು: ಆಕ್ರೋಶ ಹೊರಹಾಕಿದ ಹಿಂದೂ ನಾಯಕ

 

 

ಉಡುಪಿ: ಪ್ರವೀಣ್ ನೆಟ್ಟಾರು ಮನೆಗೆ ನಾನು ಹೊರಟಿದ್ದೆ ಹೆಜಮಾಡಿಯಲ್ಲಿ ನನ್ನನ್ನು ಪೊಲೀಸರು ತಡೆದಿದ್ದಾರೆ. ದಕ್ಷಿಣ ಕನ್ನಡ ಡಿಸಿ ಕೊಟ್ಟ ನಿಷೇದಾಜ್ಞೆ ಪತ್ರವನ್ನು ಕೈಗೆ ಕೊಟ್ಟಿದ್ದಾರೆ. ನೀವು ಮುತಾಲಿಕ್ ಬ್ಯಾನ್ ಮಾಡುತ್ತಿಲ್ಲ ಹಿಂದುತ್ವವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದೂ ವಿರೋಧಿ ಕಾಂಗ್ರೆಸ್ ಬ್ಯಾನ್ ಮಾಡಿದ್ದರೆ ಒಪ್ಪಬಹುದಿತ್ತು.

ಬಿಜೆಪಿಯವರು ಹಿಂದೂ ವಿರೋಧಿಗಳಿದ್ದಾರೆ ನೀಚ ನಿರ್ಲಜ್ಜರಿದ್ದಾರೆ. ನೂರಾರು ಜನ ರಾಜೀನಾಮೆ ಕೊಟ್ಟು ನಿಮ್ಮ ಮುಖಕ್ಕೆ ಉಗಿದಿದ್ದಾರೆ. ನಾನು ಯಾವುದೇ ಸಮಾವೇಶ ಸಭೆಗೆ ಹೋಗುತ್ತಿಲ್ಲ ಸಾಂತ್ವನ ಹೇಳಲು ಹೋಗುತ್ತಿದ್ದೇನೆ ಅಂತಾ ಉಡುಪಿಯ ಪಡುಬಿದ್ರೆಯಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.ಪರ್ಯಾಯ ಹಿಂದೂ ಪಕ್ಷ ಹುಟ್ಟುಹಾಕಲು ನೀವೇ ಕಾರಣರಾಗುತ್ತೀರಿ. ಹಿಂದೂ ರಾಷ್ಟ್ರಕ್ಕಾಗಿ ಹಿಂದುತ್ವಕ್ಕಾಗಿ ಎಂದು ಕಾರ್ಯಕರ್ತರು ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಧಿಕ್ಕರಿಸುತ್ತಾರೆ ನೋಡುತ್ತಿರಿ. ಹಿಂದುತ್ವ ವಿಚಾರದಲ್ಲಿ ನಾನು ಒಂದಿಂಚು ಕಾಂಪ್ರಮೈಸ್ ಆಗುವವನಲ್ಲ. ಬೆಳ್ಳಾರೆಗೆ ಹೋಗಲು ಎಲ್ಲರಿಗೂ ಅವಕಾಶವಿದೆ ನನಗೆ ಯಾಕಿಲ್ಲ ಎಂದು ಉಡುಪಿಯ ಪಡುಬಿದ್ರೆಯಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!