ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸುಳ್ಯ ನಡುರಾತ್ರಿ ಭಾರೀ ಶಬ್ದದೊಂದಿಗೆ ಮತ್ತೆ ಕಂಪಿಸಿದ ಭೂಮಿ..! ಭಯಭೀತರಾಗಿ ನಿದ್ದೆಯಿಂದ ಎದ್ದು ಹೊರಗೆ ಓಡಿ ಬಂದ ಜನ

ಸುಳ್ಯ ನಡುರಾತ್ರಿ ಭಾರೀ ಶಬ್ದದೊಂದಿಗೆ ಮತ್ತೆ ಕಂಪಿಸಿದ ಭೂಮಿ..! ಭಯಭೀತರಾಗಿ ನಿದ್ದೆಯಿಂದ ಎದ್ದು ಹೊರಗೆ ಓಡಿ ಬಂದ ಜನ

 

ಸಾಂದರ್ಭಿಕ ಚಿತ್ರ

 

ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಸುಳ್ಯದ ಸಂಪಾಜೆ, ಚೆಂಬು, ಕಲ್ಲುಗುಂಡಿ ಗಡಿಭಾಗ ಹಾಗೂ ಕೊಡಗಿನ ಗಡಿಭಾಗಗಳು ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಕಡೆ ಮತ್ತೊಮ್ಮೆ ಗುರುವಾರ ತಡರಾತ್ರಿ 1.15ಕ್ಕೆ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.

ಏಕಾಏಕಿ ಉಂಟಾದ ಶಬ್ದ ಗಾಢ ನಿದ್ರೆಯಲ್ಲಿದ್ದ ಜನರನ್ನು ಬಡಿದೆಬ್ಬಿಸಿದೆ. ಮೊದಲಿಗೆ ಭಾರಿ ಶಬ್ದ ಕೇಳಿ ಬಂದಿದ್ದು, ನಂತರ ಒಮ್ಮೆಲೆ ಸುಮಾರು 2 ಸೆಕೆಂಡ್​ಗಳ ಕಾಲ ಭೂಮಿ ನಡುಗಿದ ಅನುಭವ ಆಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.ಶಬ್ದದಿಂದ ಕೆಲವರು ಹೆದರಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಕಳೆದ ಒಂದು ವಾರದಲ್ಲಿ ಕೊಡಗು ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆ ನಾಲ್ಕನೇ ಬಾರಿಗೆ ಭೂಮಿ ಕಂಪಿಸಿದ ಅನುಭವವಾಗುತ್ತಿದೆ. ಈ ಘಟನೆಯಿಂದ  ಜನರು ಮತ್ತಷ್ಟೂ  ಆತಂಕಕ್ಕೊಳಗಾಗುವಂತಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!