Home › ಬಿಲ್ಲವ ಸಂಘಟನೆ ಹೋರಾಟಕ್ಕೆ ಮಣಿದ ಸರ್ಕಾರ :ನಾರಾಯಣ ಗುರುಗಳ ಪಠ್ಯ ಸೇರ್ಪಡೆಗೆ ತಿರ್ಮಾನ: ಸಮಾಜ , ವಿಜ್ಞಾನ ಪಠ್ಯ ಪುಸ್ತಕದಲ್ಲಿ ಮರು ಸೇರ್ಪಡೆಗೆ ಆದೇಶ:
ಬಿಲ್ಲವ ಸಂಘಟನೆ ಹೋರಾಟಕ್ಕೆ ಮಣಿದ ಸರ್ಕಾರ :ನಾರಾಯಣ ಗುರುಗಳ ಪಠ್ಯ ಸೇರ್ಪಡೆಗೆ ತಿರ್ಮಾನ: ಸಮಾಜ , ವಿಜ್ಞಾನ ಪಠ್ಯ ಪುಸ್ತಕದಲ್ಲಿ ಮರು ಸೇರ್ಪಡೆಗೆ ಆದೇಶ:
ONLINE PUDU / Tuesday, July 12, 2022
ಬೆಂಗಳೂರು : ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಸಮಾಜ-ವಿಜ್ಞಾನ ಪಠ್ಯದಲ್ಲಿ ಮರು ಸೇರ್ಪಡೆಗೊಳಿಸಲು ಶಿಕ್ಷಣ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ವಿ. ಸುನಿಲ್ ಕುಮಾರ್ ಅವರು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಭೇಟಿ ಮಾಡಿ ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಸಮಾಜ-ವಿಜ್ಞಾನ ವಿಷಯಕ್ಕೆ ಸೇರಿಸುವಂತೆ ಮನವಿ ಮಾಡಿದ್ದರು.
ಮನವಿಯನ್ನು ಪುರಸ್ಕರಿಸಿ ಕನ್ನಡ ಭಾಷೆಯ ಬದಲು ಸಮಾಜ-ವಿಜ್ಞಾನದಲ್ಲಿ ತತ್ ಕ್ಷಣ ಮರು ಸೇರ್ಪಡೆ ಮಾಡಲು ಸರಕಾರಿ ಆದೇಶ ನೀಡಲಾಗಿದೆ.ಈ ಬಗ್ಗೆ
ಬಿಲ್ಲವ ಸಂಘಟನೆಗಳು ಪಠ್ಯ ಕೈಬಿಟ್ಟ ವಿಚಾರದಲ್ಲಿ ಪ್ರತಿಭಟನೆಗಳನ್ನು ಮಾಡಿ ಸುನಿಲ್ ಕುಮಾರ್ ಅವರ ಮೇಲೆ ತೀವ್ರ ಒತ್ತಡವನ್ನು ತರಲಾಗಿತ್ತು.ಈ ನಿಟ್ಟಿನಲ್ಲಿ ಬಿಲ್ಲವ ಸಂಘಟನೆಗಳ ಹೋರಾಟಕ್ಕೆ ಸರ್ಕಾರ ತಲೆಬಾಗಿದಂತಾಗಿದೆ.