Home › ಉಜಿರೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು: ತೆಂಗಿನ ಕಾಯಿ ತೆಗೆಯಲು ಹತ್ತಿದ ವೇಳೆ ದುರ್ಘಟನೆ:
ಉಜಿರೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು: ತೆಂಗಿನ ಕಾಯಿ ತೆಗೆಯಲು ಹತ್ತಿದ ವೇಳೆ ದುರ್ಘಟನೆ:
ONLINE PUDU / Wednesday, July 27, 2022
ಬೆಳ್ತಂಗಡಿ: ತೆಂಗಿನ ಕಾಯಿ ತೆಗೆಯಲು ತೆಂಗಿನ ಮರ ಹತ್ತಿದ ವ್ಯಕ್ತಿಯೊಬ್ಬರು ಆಯಾ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆಯ ನಿನ್ನಿಕಲ್ಲು ಪಾಲೆಂಜ ಎಂಬಲ್ಲಿ ಸ್ಥಳೀಯ ನಿವಾಸಿ ಆನಂದ (40) ಎಂಬವರು ತೆಂಗಿನ ಕಾಯಿ ಕೀಳಲು ಮರ ಹತ್ತಿದಾಗ ಕಾಲು ಜಾರಿ ಆಯಾ ತಪ್ಪಿ ಕೆಳಗೆ ಬಿದ್ದರೆನ್ನಲಾಗಿದೆ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.