ಇಂಗ್ಲೆಂಡ್: ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತ ಅಮೋಘ ಸಾಧನೆಗೈದಿದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ 11 ದಿನಗಳ ಹಿಂದೆ ಆರಂಭಗೊಂಡಿದ್ದ ಕಾಮನ್‌ವೆಲ್ತ್ ಗೇಮ್ಸ್ ಅಂತ್ಯಗೊಂಡಿತು. ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರೀಡಾಕೂಟದ ಕೊನೆಯ ದಿನ ಭಾರತದ ಅಥ್ಲೀಟ್ಸ್ ನಾಲ್ಕು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.ಜುಲೈ 29ರಂದು ಇಂಗ್ಲೆಂಡ್ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾದ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ ಒಟ್ಟು 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ ಒಟ್ಟು 61 ಪದಕ ಸಂಪಾದಿಸಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದೆ. ಪ್ರತಿಷ್ಟಿತ ಕ್ರೀಡಾಕೂಟದಲ್ಲಿ ಸಂಕೇತ್ ಸರ್ಗರ್ ಮೊದಲ ಬೆಳ್ಳಿ ಪದಕ ಗೆಲ್ಲುವ ಮೂಲಕ ಪದಕಗಳ ಖಾತೆ ತೆರೆದಿದ್ದರು. 55 ಕೆಜಿ ಭಾರ ಎತ್ತುವಿಕೆಯಲ್ಲಿ ಇವರು ಬೆಳ್ಳಿ ಸಾಧನೆ ಮಾಡಿದ್ದರು. ಇದಾದ ಬಳಿಕ ದೇಶದ ಅನೇಕ ಕ್ರೀಡಾಪಟುಗಳು ಅಮೋಘ ಪ್ರದರ್ಶನ ತೋರಿ, ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಪದಕ ವಿಜೇತರ ಪಟ್ಟಿ ಇಂತಿದೆ: ಸಂಕೇತ್ ಸರ್ಗರ್: ಬೆಳ್ಳಿ (ಭಾರ ಎತ್ತುವಿಕೆ) ಮೀರಾಬಾಯಿ ಚಾನು: ಚಿನ್ನ( ಭಾರ ಎತ್ತುವಿಕೆ) ಜೆರೆಮಿ ಲಾಲ್ರಿನ್ನುಂಗ: ಚಿನ್ನ (ಪುರುಷರ ಭಾರ ಎತ್ತುವಿಕೆ) ಅಚಿಂತ ಶೆಯುಲಿ: ಚಿನ್ನ(ಪುರುಷರ ಭಾರ ಎತ್ತುವಿಕೆ) ಸುಧೀರ್: ಚಿನ್ನ(ಪುರುಷರ ಹೆವಿವೇಟ್ ಪ್ಯಾರಾ ಪವರ್‌ಲಿಫ್ಟಿಂಗ್) ಪಿ.ವಿ.ಸಿಂಧು: ಚಿನ್ನ(ಬ್ಯಾಡ್ಮಿಂಟನ್) ಲಕ್ಷ್ಯಸೇನ್: ಚಿನ್ನ(ಬ್ಯಾಡ್ಮಿಂಟನ್) ಸಾತ್ವಿಕ್-ಚಿರಾಗ್: ಚಿನ್ನ (ಬ್ಯಾಡ್ಮಿಂಟನ್ ಡಬಲ್ಸ್) ಬಿಂದ್ಯಾರಾಣಿ: ಬೆಳ್ಳಿ(ಮಹಿಳೆಯರ ಭಾರ ಎತ್ತುವಿಕೆ) ಸುಶೀಲಾ ಲಿಕ್ಮಾಬಮ್: ಬೆಳ್ಳಿ(ಮಹಿಳೆಯರ ಜುಡೋ) ಬ್ಯಾಡ್ಮಿಂಟನ್ ಮಿಶ್ರ ತಂಡ: ಬೆಳ್ಳಿ ತುಲಿಕಾ ಮಾನ್: ಬೆಳ್ಳಿ(ಮಹಿಳೆಯರ ಜೂಡೋ) ಮುರಳಿ ಶ್ರೀಶಂಕರ್: ಬೆಳ್ಳಿ(ಪುರುಷರ ಲಾಂಗ್ ಜಂಪ್) ಗುರುರಾಜ ಪೂಜಾರಿ: ಕಂಚು(ಪುರುಷರ ಭಾರ ಎತ್ತುವಿಕೆ) ವಿಜಯ್ ಕುಮಾರ್ ಯಾದವ್: ಕಂಚು(ಪುರುಷರ ಜೂಡೋ) ಹರ್ಜಿಂದರ್ ಕೌರ್: ಕಂಚು(ಮಹಿಳೆಯರ ಭಾರ ಎತ್ತುವಿಕೆ) ಲವ್ಪ್ರೀತ್ ಸಿಂಗ್: ಕಂಚು (ಪುರುಷರ ಭಾರ ಎತ್ತುವಿಕೆ) ಸೌರವ್ ಘೋಸಲ್: ಕಂಚು(ಪುರುಷರ ಸಿಂಗಲ್ಸ್ ಸ್ಕ್ವಾಷ್) ಗುರುದೀಪ್ ಸಿಂಗ್: ಕಂಚು(ಭಾರ ಎತ್ತುವಿಕೆ) ತೇಜಸ್ವಿನ್ ಶಂಕರ್: ಕಂಚು(ಪುರುಷರ ಹೈ ಜಂಪ್) ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ಮತ್ತು ದೀಪಕ್ ಪುನಿಯಾ: ಚಿನ್ನ; ಕುಸ್ತಿ ವಿಭಾಗ .ಅಂಶು ಮಲಿಕ್: ಬೆಳ್ಳಿ (ಮಹಿಳೆಯರ ಕುಸ್ತಿ) .ದಿವ್ಯಾ ಕಕ್ರಾನ್: ಕಂಚು(ಮಹಿಳೆಯರ ಕುಸ್ತಿ). ಮೋಹಿತ್ ಗ್ರೆವಾಲ್: ಕಂಚು(ಕುಸ್ತಿ) ಮಹಿಳಾ ಕ್ರಿಕೆಟ್: (ಬೆಳ್ಳಿ ಪದಕ) ಮಹಿಳೆಯರ ಹಾಕಿ( ಕಂಚಿನ ಪದಕ) ಪುರುಷರ ಹಾಕಿ( ಬೆಳ್ಳಿ ಪದಕ) ಲಾನ್ ಬಾಲ್ಸ್ ಮಹಿಳಾ ತಂಡ( ಚಿನ್ನದ ಪದಕ)ಭಾರತವು 12 ಪದಕಗಳನ್ನು ಕುಸ್ತಿಯಲ್ಲಿ ಗೆದ್ದಿದ್ದು, 10 ಪದಕ ಭಾರ ಎತ್ತುವಿಕೆ (ವೈಟ್ ಲಿಫ್ಟಿಂಗ್)ಯಲ್ಲಿ ದಕ್ಕಿಸಿಕೊಂಡಿದೆ. ಉಳಿದಂತೆ 7 ಪದಕ ಬಾಕ್ಸಿಂಗ್ನಲ್ಲಿ ಬಂದಿವೆ. ಟೆಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ನಲ್ಲೂ ದೇಶದ ಅಥ್ಲೀಟ್ಸ್ ಉತ್ತಮ ಸಾಧನೆ ಮಾಡಿದ್ದಾರೆ.