ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತೆಂಕಕಾರಂದೂರು ದೇವಸ್ಥಾ‌ನದಲ್ಲಿ ಕಳ್ಳತನ: ಬಾಗಿಲು ಒಡೆದು ಕಾಣಿಕೆ ಡಬ್ಬಿಯ ಹಣ ಕಳವು:

ತೆಂಕಕಾರಂದೂರು ದೇವಸ್ಥಾ‌ನದಲ್ಲಿ ಕಳ್ಳತನ: ಬಾಗಿಲು ಒಡೆದು ಕಾಣಿಕೆ ಡಬ್ಬಿಯ ಹಣ ಕಳವು:

 

ಬೆಳ್ತಂಗಡಿ :ತೆಂಕಕಾರಂದೂರು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಂಗಳವಾರ ರಾತ್ರಿ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಒಡೆದು ಹಣ ದೋಚಿದ್ದಾರೆ. ಅದಲ್ಲದೇ ಸಿಸಿ. ಕ್ಯಾಮಾರದ ಡಿವಿಆರ್ ಮೋನಿಟರ್ ಸಮೇತ ಕೊಂಡು ಹೋಗಿದ್ದಾರೆ, ದೇವಾಲಯದ ಅರ್ಚಕರು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಬಾಗಿಲಿನ ಬೀಗ ಮುರಿದು ಅರ್ಧ ಬಾಗಿಲು ತೆರೆದಿದ್ದು ಸಂಶಯ ಬಂದು ಆಡಳಿತ ಮಂಡಳಿಯ ಸದಸ್ಯರಿಗೆ ಮಾಹಿತಿ ನೀಡಿದಾಗ ಕಳ್ಳರು ನುಗ್ಗಿದ್ದು ಖಚಿತವಾಯಿತು, ತಕ್ಷಣ ವೇಣೂರು ಠಾಣೆಗೆ ಮಾಹಿತಿ ನೀಡಿ ಕೂಡಲೇ ಆರಕ್ಷಕ ಠಾಣೆಯ ಠಾಣಾಧಿಕಾರಿ ಸೌಮ್ಯ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿ ಕೊಂಡರು .

 

 

ಬೆರಳಚ್ಚು ತಜ್ಞರು,ಶ್ವಾನದಳ ಬಂದು ಪರಿಶೀಲಿಸಿದೆ, ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಲ್ಲಿ ಠಾಣಾಧಿಕಾರಿ ಸೌಮ್ಯ ನವರು ಕೆಲವು ಮುಂಜಾಗ್ರತೆ ಯ ಮಾಹಿತಿ ನೀಡಿ,ಈ ತನಿಖೆ ಯನ್ನು ಅತ್ಯಂತ ವೇಗವಾಗಿ ಬೆನ್ನು ಹಿಡಿಯುತ್ತೇವೆ ಎಂಬ ಭರವಸೆ ನೀಡಿದರು. ಈ ಹಿಂದೆಯೂ ಇದೇ ದೇವಸ್ಥಾನ ದಲ್ಲಿ ಕಳ್ಳತನ ವಾಗಿ ದೇವರ ಉತ್ಸವ ಬಲಿಮೂರ್ತಿ ಇತರ ಅಮೂಲ್ಯ ವಸ್ತು ಗಳನ್ನು ದೋಚಿರುತ್ತಾರೆ ಆದರೆ ಅದರ ಬಗ್ಗೆ ಈ ಬಗ್ಗೆ ಯಾವುದೇ ಮಾಹಿತಿ ಇದುವರೆಗೂ ಸಿಗಲಿಲ್ಲ, ಅಲ್ಲದೆ ಇತ್ತೀಚೆಗೆ ಸ್ಥಳೀಯ ಪ್ರದೇಶದ ಕೆಲವು ದೇವಸ್ಥಾನದಲ್ಲಿ ಕಳೆದ ತಿಂಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!