Home › ಮೈಸೂರು ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷನ ವಶಕ್ಕೆ ಪಡೆದ ಎನ್ಐಎ: ಸಿಸಿಬಿ ಕಛೇರಿಗೆ ಮುತ್ತಿಗೆ ಹಾಕಿದ ಪಿಎಫ್ಐ ಕಾರ್ಯಕರ್ತರು:
ಮೈಸೂರು ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷನ ವಶಕ್ಕೆ ಪಡೆದ ಎನ್ಐಎ: ಸಿಸಿಬಿ ಕಛೇರಿಗೆ ಮುತ್ತಿಗೆ ಹಾಕಿದ ಪಿಎಫ್ಐ ಕಾರ್ಯಕರ್ತರು:
ONLINE PUDU / Thursday, September 22, 2022
ಬೆಂಗಳೂರು: ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ಪಿಎಫ್ಐ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮಹಮ್ಮದ್ ಕಲೀಮುಲ್ಲಾ ಅವರನ್ನು ಎನ್.ಐ.ಎ ತಂಡ ವಶಕ್ಕೆ ಪಡೆಯುತ್ತಿದ್ದಂತೆ, ಅಶೋಕ್ ರಸ್ತೆಯಲ್ಲಿರುವ ಸಿಸಿಬಿ ಕಚೇರಿ ಮುಂದೆ ಜಮಾಯಿಸಿದ ಪಿಎಫ್ಐ, ಎಸ್ಎಫ್ಐ ಹಾಗೂ ಕಲೀಮುಲ್ಲಾ ಬೆಂಬಲಿಗರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಲೀಮುಲ್ಲಾ ಅವರನ್ನು ಪೊಲೀಸ್ ಭದ್ರತೆಯಲ್ಲಿ ಜೀಪಿನಲ್ಲಿ ಕರೆದೊಯ್ಯುವಾಗ, ಪೊಲೀಸ್ ಜೀಪನ್ನು ಪಿಎಫ್ಐ ಕಾರ್ಯಕರ್ತರು ಅಡ್ಡ ಹಾಕಿದರು. ಕಲೀಮುಲ್ಲಾ ಅವರನ್ನು ಪೊಲೀಸರು ಬಿಗಿಭದ್ರತೆಯಲ್ಲಿ ಬೆಂಗಳೂರಿನತ್ತ ಕರೆದೊಯ್ದರು. ಈ ಬಗ್ಗೆ ಬೆಂಗಳೂರಿನಲ್ಲಿರುವ ಎನ್.ಐ.ಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಕಾರ್ಯಕರ್ತರು ತೆರಳುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.