ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಿಡ್ಲೆ ಗ್ರಾಮ ಪಂಚಾಯತ್:ತಹಶೀಲ್ದಾರ್ ಗ್ರಾಮ ವಾಸ್ತವ್ಯ: ಇಲಾಖಾ ಅಧಿಕಾರಿಗಳು ಗೈರು ಗ್ರಾಮಸ್ಥರ ಆಕ್ರೋಶ: ತಾಲೂಕು ಕಚೇರಿಯ ಸಮಸ್ಯೆಗಳನ್ನು ಸರಿಪಡಿಸಿ ಸಾರ್ವಜನಿಕರ ಒತ್ತಾಯ:

ನಿಡ್ಲೆ ಗ್ರಾಮ ಪಂಚಾಯತ್:ತಹಶೀಲ್ದಾರ್ ಗ್ರಾಮ ವಾಸ್ತವ್ಯ: ಇಲಾಖಾ ಅಧಿಕಾರಿಗಳು ಗೈರು ಗ್ರಾಮಸ್ಥರ ಆಕ್ರೋಶ: ತಾಲೂಕು ಕಚೇರಿಯ ಸಮಸ್ಯೆಗಳನ್ನು ಸರಿಪಡಿಸಿ ಸಾರ್ವಜನಿಕರ ಒತ್ತಾಯ:

 

ಬೆಳ್ತಂಗಡಿ :ನಿಡ್ಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರು ನೆರವೇರಿಸಿ ಮಾತನಾಡುತ್ತಾ ಸರಕಾರಿ ಅಧಿಕಾರಿಗಳು ಜನರ ಬಳಿಗೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮ ಇದಾಗಿದ್ದು ಸರಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ಸೌಲಭ್ಯಗಳನ್ನು ಪಡೆಯಲು ಇದು ಸಹಕಾರಿಯಾಗಿದೆ ಎಂದರು.

 

 

 

ಸಭೆಯಲ್ಲಿ ಗ್ರಾಮಸ್ಥರು ಗ್ರಾಮದಲ್ಲಿರುವ ಅರಣ್ಯ ಹಾಗೂ ಕಂದಾಯ ಇಲಾಖೆಯ ನಡುವಿನ ಜಮೀನು ಗಡಿ ಗುರುತಿನ ಸಾಮಸ್ಯೆಯಿಂದಾಗಿ ಅಕ್ರಮ ಸಕ್ರಮ 94ಸಿ ಸೇರಿದಂತೆ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿರುವ ಜನ ಹಲವು ವರ್ಷಗಳಿಂದ ನಿರಂತರವಾಗಿ ಅಲೆದಾಡುತ್ತಿದ್ದಾರೆ ಇದಕ್ಕೆ ಪರಿಹಾರ ಕಾಣಬೇಕು ಎಂದು ಜನರು ಒತ್ತಾಯಿಸಿದರು. ಈ ಬಗ್ಗೆ ಉತ್ತರಿಸಿದ ಅಧಿಕಾರಿಗಳು ಈಗಾಗಲೆ ರೆಖ್ಯದಲ್ಲಿ ಸಮಸ್ಯೆಯನ್ನು ಪರಿಹರಿಸಲಾಗಿದ್ದು ಕಳೆಂಜದಲ್ಲಿ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು ಬಳಿಕ ನಿಡ್ಲೆ ಗ್ರಾಮ ಪಂಚಾಯತಿನಲ್ಲಿ ಇದನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಾಲೂಕು ಕಚೇರಿಗೆ ಬಂದರೆ ಎಲ್ಲಾ ದಾಖಲೆಗಳು ಒಂದೇ ಕಡೆ ಲಭಿಸುವಂತೆ ಮಾಡಬೇಕು ಬೇರೆ ಬೇರೆ ದಾಖಲೆಗಳಿಗಾಗಿ ಬೇರೆ ಬೇರೆ ಕಡೆ ಅಲೆದಾಡಬೇಕಾದ ಸ್ಥಿತಿ ಬಂದಿದೆ.ಅದಲ್ಲದೇ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಲಂಚದ ಬೇಡಿಕೆಯನ್ನೂ ನೀಡುತಿದ್ದಾರೆ ಕೊಡದಿದ್ದರೆ ಕೆಲಸ ಆಗುತ್ತಿಲ್ಲ ವಿನಾ: ಕಾರಣ ಅಲೆದಾಡಿಸುತಿದ್ದಾರೆ ಅದಲ್ಲದೇ ಕೆಲವು ಕಡತಗಳೂ ನಾಪತ್ತೆಯಾಗಿದೆ ಇದರಿಂದ ಜನರಿಗೆಲ್ಲ ತೊಂದರೆಯಾಗುತ್ತಿದೆ ಇದನ್ನೂ ಸರಿಪಡಿಸುವಂತೆ ಜನರು ಒತ್ತಾಯಿಸಿದರು. ಇಂತಹ ಸಮಸ್ಯೆ ಆದಲ್ಲಿ  ನನ್ನ ಗಮನಕ್ಕೆ ತನ್ನಿ ತಕ್ಷಣ ಸ್ಪಂದಿಸುವುದಾಗಿ    ತಹಶೀಲ್ದಾರ್ ತಿಳಿಸಿದರು.ಅದಲ್ಲದೇ ಗ್ರಾಮದಲ್ಲಿನ ನಾನಾ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಗಮನ ಸೆಳೆದರು.ಕೆಲವೊಂದು ಇಲಾಖೆಯ ಅಧಿಕಾರಿಗಳು ಗೈರಾಗಿರುವುದರ ಬಗ್ಗೆ ಗ್ರಾಮಸ್ಥರು ಅಸಾಮಾಧಾನ ವ್ಯಕ್ತಪಡಿಸಿದರು ಗ್ರಾಮ ಸಭೆಗೂ ಅಧಿಕಾರಿಗಳು ಬರುವುದಿಲ್ಲ ಈ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ ಕಚೇರಿಗಳಿಗೆ ಹೋದರೆ ಕೇಳುವವರೇ ಇಲ್ಲ ಹಾಗಾದರೆ ಸಾರ್ವಜನಿಕರು ಏನು ಮಾಡಬೇಕು. ಈ ಕಾರ್ಯಕ್ರಮ ಕಾಟಾಚಾರಕ್ಕೆ ಮಾಡುವುದಾದರೆ ಇದರ ಅವಶ್ಯಕತೆ ಏನಿತ್ತು ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಅವರಿಗೆ ಒತ್ತಾಯಿಸಿದರು. ಗೈರು ಹಾಜರಿಯಾದ ಇಲಾಖೆಯ ಅಧಿಕಾರಿಗಳಿಗೆ ನೋಟೀಸ್ ನೀಡುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ವಹಿಸಿದ್ದರು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ನಿಡ್ಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ಯಾಮಲಾ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ತಾಲೂಕು ಪಶು ವೈಧ್ಯಾಧಿಕಾರಿ ಡಾ.ಪ್ರಕಾಶ್, ಕೃಷಿ ಅಧಿಕಾರಿ ಹೂಗಾರ್, ಸಿಡಿಪಿಒ ಪ್ರಿಯಾ ಆಗ್ನೆಸ್, ಪಶುಸಂಗೋಪನಾ ಅಧಿಕಾರಿ ಜಯಕೀರ್ತಿ ಜೈನ್,ಸಮಾಜಕಲ್ಯಾಣ ಇಲಾಖೆಯ ಹೇಮಲತಾ,ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ರವಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!