Home › ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದ ದಾನಿಗಳಿಗೆ ಗೌರವಾರ್ಪಣೆ: ಬಡಗಕಾರಂದೂರು ಶಾಲೆಯಲ್ಲಿ ಕಾರ್ಯಕ್ರಮ:
ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದ ದಾನಿಗಳಿಗೆ ಗೌರವಾರ್ಪಣೆ: ಬಡಗಕಾರಂದೂರು ಶಾಲೆಯಲ್ಲಿ ಕಾರ್ಯಕ್ರಮ:
ONLINE PUDU / Sunday, September 25, 2022
ಬೆಳ್ತಂಗಡಿ: ಹಿರಿಯ ಪ್ರಾಥಮಿಕ ಶಾಲೆ ಬಡಗಕಾರಂದೂರು ಅಳದಂಗಡಿ. ಇಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದ ದಾನಿಗಳಾದ ಶ್ರೀಮತಿ ಅಮಣಿ ಮಂಜು ದೇವಾಡಿಗ ಮತ್ತು ಮಕ್ಕಳು ಅಮಣಿಮಂಜು ನಿವಾಸ ದೋರಿಂಜೆ, ಶ್ರೀಮತಿ ಎಮ್.ಕೆ ಮಾಲ ಕೆದ್ದು, ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೆಸರರಾದ ಶಿವಪ್ರಸಾದ ಅಜಿಲ ಮತ್ತು ಮಹಾಗಣಪತಿ ಹಾರ್ಡ್ ವೇರ್ ಮಾಲೀಕ ಚಂದ್ರಶೇಖರ್ ಇವರನ್ನು ಶಾಲಾ ಅಭಿವೃದ್ಧಿ ಸಮಿತಿ, ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ನಿಕಟ ಪೂರ್ವ ಅಧ್ಯಕ್ಷರಾದ ಸದಾನಂದ ಪೂಜಾರಿ ಉಂಗಿಲ ಬೈಲು, ಶಾಲಾ ಸಮಿತಿಯ ಉಪಾಧ್ಯಕ್ಷ ಆನಂದ ಪೂಜಾರಿ ನೀರಲ್ಕೆ, ಶಾಲಾ ಮುಖ್ಯೋಪಾಧ್ಯಾಯರು ಹರೀಶ್ ಆಚಾರ್ಯ ಪಂಚಾಯಿತಿ ಉಪಾಧ್ಯಕ್ಷ, ಚಂದ್ರಶೇಖರ್ ಅಳದಂಗಡಿ, ಕೃಷ್ಣಪ್ಪ ಪೂಜಾರಿ ಬಿಕ್ಕಿರ, ಶಶಿಕಾಂತ್ ನಾಯಕ್ ಪಾಲಬೆ, ಸುರೇಂದ್ರ ಬಲ್ಯಾಯ, ಸಮಿತಿಯ ಸದಸ್ಯರಾದ ಶ್ರೀಮತಿ ಪುಷ್ಪಲತಾ ಮತ್ತು ಶ್ರೀಮತಿ ಪುಷ್ಪ ಉಪಸ್ಥಿತರಿದ್ದರು.