ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉದ್ಯೋಗಕಾಂಕ್ಷಿಗಳಿಗೆ ಸಿಹಿಸುದ್ಧಿ: ಕಾನ್ಸ್ ಟೇಬಲ್ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ:

ಉದ್ಯೋಗಕಾಂಕ್ಷಿಗಳಿಗೆ ಸಿಹಿಸುದ್ಧಿ: ಕಾನ್ಸ್ ಟೇಬಲ್ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ:

 

 

ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್‌ ಕಾನ್ಸ್​ಟೇಬಲ್​ ಸಿವಿಲ್‌, ಸೇವಾನಿರತ ಮತ್ತು ಬ್ಯಾಕ್‌ಲಾಗ್‌ ಸೇರಿದಂತೆ 1,137 ಹುದ್ದೆಗಳ ನೇರ ನೇಮಕಕ್ಕೆ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ದಿನಾಂಕ, ಶುಲ್ಕ ಸೇರಿದಂತೆ ಇತರೆ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್​ಗೆ ಭೇಟಿ ನೀಡಬಹುದು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್‌ ಕಾನ್ಸ್​ಟೇಬಲ್​ ಸಿವಿಲ್‌, ಸೇವಾನಿರತ ಮತ್ತು ಬ್ಯಾಕ್‌ಲಾಗ್‌ ಸೇರಿದಂತೆ 1,137 ಹುದ್ದೆಗಳ ನೇರ ನೇಮಕಕ್ಕೆ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಮ್ಮ ಸರ್ಕಾರ ಈ ಮೂಲಕ ಇಲಾಖೆಯ ಮಾನವ ಸಂಪನ್ಮೂಲಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದಿದ್ದಾರೆ. ಸರ್ಕಾರದ ಪೊಲೀಸ್​ ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿ ಆದೇಶದಿಂದ ಅಭ್ಯರ್ಥಿಗಳಿಗೆ ಖುಷಿ ನೀಡಿದೆ. ಅಕ್ಟೋಬರ್​ 20.10.2022 (ಬೆಳಿಗ್ಗೆ 10.00 ಗಂಟೆ) ರಿಂದ ಅರ್ಜಿ ಸಲ್ಲಿಸಬಹುದು. 21.11.2022 ಅರ್ಜಿ ಸಲ್ಲಿಸಲು (ಸಂಜೆ 06.00 ಗಂಟೆ) ಕೊನೆಯ ದಿನವಾಗಿದೆ. ಶುಲ್ಕ ಸೇರಿದಂತೆ ಇತರೆ ಮಾಹಿತಿಗಾಗಿ

 

https://ksp.karnataka.gov.in/ ಅಥವಾ https://ksp-recruitment.in/ ಇಲಾಖೆಯ ಅಧಿಕೃತ ವೆಬ್ ಸೈಟ್​ಗೆ ಭೇಟಿ ನೀಡಬಹುದು.

 

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!